ರಾಜ್ಯದಲ್ಲಿ ಲಾಕ್ಡೌನ್ ಆದೇಶ ಜಾರಿಯಾಗಿರೋದ್ರಿಂದ ಜನ ಸಾಮಾನ್ಯರು ಮನಸ್ಸಿಗೆ ಬಂದಾಗೆಲ್ಲ ಮನೆಯಿಂದ ಹೊರಬರೋಕೆ ಆಗ್ತಿಲ್ಲ. ಪೊಲೀಸರ ಭಯದಿಂದಾಗಿ ಅನೇಕರು ಮನೆಯಲ್ಲೇ ಕುಳಿತುಕೊಂಡರೆ ಇನ್ನೂ ಹಲವರು ಖಾಕಿ ಕಣ್ತಪ್ಪಿಸಿ ಮನೆಯಿಂದ ಹೊರಬರೋಕೆ ಇನ್ನಿಲ್ಲದ ಪ್ಲಾನ್ ಮಾಡ್ತಿದ್ದಾರೆ.
ಉಡುಪಿ ಜಿಲ್ಲೆಯ ತೆಕ್ಕಟ್ಟೆ ಎಂಬಲ್ಲಿ ಸೈಕಲ್ ಸವಾರನೊಬ್ಬ ಪೊಲೀಸರ ಲಾಠಿ ಏಟಿಗೆ ಹೆದರಿ ಬೆನ್ನಿಗೆ ತಗಡಿನ ಶೀಟು ಹಾಗೂ ತಲೆಗೆ ಹೆಲ್ಮೆಟ್ ಹಾಕಿಕೊಂಡು ಹೋಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅನೇಕರು ಸೈಕಲ್ ಸವಾರನ ಪ್ಲಾನ್ ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಪೊಲೀಸರು ಅನಗತ್ಯ ಬಲ ಪ್ರಯೋಗ ಮಾಡಬಾರದು: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ರಾಜ್ಯದಲ್ಲಿ ಲಾಕ್ಡೌನ್ ಜಾರಿ ಬಳಿಕ ಪೊಲೀಸರ ಲಾಠಿ ಚಾರ್ಜ್ ವಿಚಾರವಾಗಿ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ಪೊಲೀಸ್ ಇಲಾಖೆ ಬಳಿ ಸಂಯಮ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಅನೇಕ ಕಡೆಗಳಲ್ಲಿ ಕೋವಿಡ್ ಸೋಂಕಿತರ ಮೇಲೆಯೇ ಲಾಠಿ ಪ್ರಹಾರವಾಗಿದ್ದು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಲಾಠಿ ಚಾರ್ಜ್ಗೆ ಸಂಬಂಧಿಸಿದ ಸಾಕಷ್ಟು ಅಮಾನವೀಯ ವಿಡಿಯೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಸ್ವತಃ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಲಾಕ್ಡೌನ್ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ. ಇದನ್ನ ಹೊರತುಪಡಿಸಿ ಬಲ ಪ್ರಯೋಗ ಮಾಡಬೇಡಿ ಎಂದು ಟ್ವಿಟರ್ ಮೂಲಕ ಸೂಚನೆ ನೀಡಿದ್ದಾರೆ.
https://www.youtube.com/watch?v=CQzPGqcxK6I