ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದು ಈ ಮೂಲಕ ದೇಶದಲ್ಲೇ ಎರಡನೆ ಅತಿ ಹೆಚ್ಚು ಕೊರೊನಾ ಪ್ರಕರಣವನ್ನ ಕರ್ನಾಟಕ ವರದಿ ಮಾಡುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದಲ್ಲಿ ಲಸಿಕೆಗೂ ಸಹ ಅಭಾವ ಕಾಣಿಸಿಕೊಂಡಿರೋದು ಮತ್ತೊಂದು ಚಿಂತಾಜನಕ ವಿಚಾರವಾಗಿದೆ.
ಆದರೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಯು ಲಸಿಕೆ ಆದ್ಯತೆಯ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದೆಹಲಿ, ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳ ಹೆಸರಿದ್ದು ಕರ್ನಾಟಕ ಈ ಪಟ್ಟಿಯಿಂದ ಹೊರತಾಗಿದೆ.
ಕೊರೊನಾ ಆತಂಕದಲ್ಲಿರುವವರಿಗೆ ಗುಡ್ ನ್ಯೂಸ್: ನೆಗಡಿ – ಜ್ವರ ಸೇರಿದಂತೆ ಎಲ್ಲ ವೈರಸ್ ಓಡಿಸಲು ನೆರವಾಗುತ್ತೆ ಈ ಕಷಾಯ….!
ಇನ್ನು ಈ ಸಂಬಂಧ ಆಕ್ರೋಶ ಹೊರಹಾಕಿರುವ ರಾಜ್ಯ ಕಾಂಗ್ರೆಸ್ ಟ್ವಿಟರ್ನಲ್ಲಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದೆ. ಇದು ರಾಜ್ಯ ಸರ್ಕಾರದ ಅಸಾಮರ್ಥ್ಯವೋ …? ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯೋ ಅನ್ನೋದನ್ನ ಸಚಿವ ಆರ್. ಸುಧಾಕರ್ ಸ್ಪಷ್ಟಪಡಿಸಬೇಕು. ಕೇಂದ್ರ ಸರ್ಕಾರ ನೀಡಿರುವ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಏಕಿಲ್ಲ…? ವ್ಯಾಕ್ಸಿನ್ಗಾಗಿ ಸರ್ಕಾರ ಬೇಡಿಕೆಯನ್ನೇ ಇಟ್ಟಿಲ್ಲವೇ..? ಇಟ್ಟಿದ್ದರೆ ಕೇಂದ್ರ ವಂಚಿಸಿದೆಯೇ? ವ್ಯವಸ್ಥೆ ಸರಿಪಡಿಸುವ ಎಳೆ ಸಂಸದನೂ ಸೇರಿ 25 ಸಂಸದರು ಎಲ್ಲಿ ಅಡಗಿದ್ದಾರೆ? ಎಂದು ಟ್ವೀಟಾಸ್ತ್ರ ಬಳಕೆ ಮಾಡಿದೆ.
ರಾಜ್ಯದಲ್ಲಿ ನಿನ್ನೆ ಒಂದೇ ದಿನಕ್ಕೆ 39,305 ಮಂದಿ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 32,188ರಷ್ಟಾಗಿದೆ. ರಾಜ್ಯದಲ್ಲಿ ಪ್ರಸ್ತುತ 5,71,006 ಸಕ್ರಿಯ ಕೊರೊನಾ ಪ್ರಕರಣಗಳು ಇವೆ.