ಬೆಂಗಳೂರು: ಕೊರೊನಾ ಎರಡನೇ ಅಲೆ ಅಟ್ಟಹಾಸ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೀಗ ಕೊರೊನಾ ಸೋಂಕಿತರಲ್ಲಿ ’ಬ್ಲಾಕ್ ಫಂಗಸ್’ ಪತ್ತೆಯಾಗುತ್ತಿದೆ. ಕೊರೊನಾ ಸೋಂಕು ನಿವಾರಣೆಯಾದ ಹಲವರಲ್ಲಿ ಇಂತಹ ಸಮಸ್ಯೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಕೊರೊನಾ ಸೋಂಕು ನಿವಾರಣೆಯಾದ ಬಳಿಕ ಈ ಬ್ಲಾಕ್ ಫಂಗಸ್ ಕಂಡುಬರುತ್ತಿದ್ದು, ಅತಿಯಾದ ತಲೆ ನೋವು, ಕಣ್ಣಿನ ಸುತ್ತ ನೋವು, ಕಣ್ಣೀರಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬ್ಲಾಕ್ ಫಂಗಸ್ ನಿಂದ ದೃಷ್ಟಿಯನ್ನೇ ಕಳೆದುಕೊಳ್ಳಬಹುದಾದ ಅಪಾಯ ಹೆಚ್ಚಿದೆ.
ಕೊರೊನಾ ಭಯ ಮರೆಸುತ್ತೆ ಈ ವಿಡಿಯೋ
ಕೊರೊನಾದಿಂದ ಗುಣಮುಖರಾದವರು ಶುಗರ್ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬೇಕು. ಅತಿಯಾದ ಸ್ಟಿರಾಯ್ಡ್, ಆಂಟಿ ಬಯೋಟಿಕ್ ತೆಗೆದುಕೊಳ್ಳಬಾರದು. ಒಂದೊಮ್ಮೆ ನಿಮ್ಮಲ್ಲಿ ಬ್ಲಾಕ್ ಫಂಗಸ್ ನಂತಹ ಸಮಸ್ಯೆ ಕಂಡುಬಂದಲ್ಲಿ ಬ್ರೇನ್ ಡ್ಯಾಮೇಜ್ ಸಾಧ್ಯತೆ ಹೆಚ್ಚು. ಬ್ಲಾಕ್ ಫಂಗಸ್ ಲಕ್ಷಣ ಕಂಡುಬಂದರೆ ತಕ್ಷಣ ENT/ನ್ಯೂರೋ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ.
ಈಗಾಗಲೇ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಕರ್ನಾಟಕದಲ್ಲಿ 35 ಪ್ರಕರಣ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರು ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.