ಕೋವಿಡ್ ಸಾಂಕ್ರಮಿಕದಿಂದ ಆತಂಕಿತರಾಗಿರುವ ದೇಶವಾಸಿಗಳನ್ನು ತುಸು ನಿರಾಳವಾಗಿಸಲು ಸೆಲೆಬ್ರಿಟಿಗಳು ಮುಂದೆ ಬಂದಿದ್ದು, ತಂತಮ್ಮ ಪ್ರತಿಭೆಗಳನ್ನು ಬಳಸಿಕೊಂಡು ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ
ರ್ಯಾಪರ್-ಸಿಂಗರ್ ಬಾಬಾ ಸೆಹಗಲ್ ಸಹ ಈ ನಿಟ್ಟಿನಲ್ಲಿ ಮುಂದೆ ಬಂದಿದ್ದು, ಕೋವಿಡ್-19 ಕುರಿತು ಜಾಗೃತಿ ಮೂಡಿಸಲು ಬೋನಿ ಎಂರ 1978ರ ಹಿಟ್ ಹಾಡು ರಾಸ್ಪುಟಿನ್ಗೆ ತಮ್ಮದೇ ವರ್ಶನ್ ಮಾಡಿ ಬಿಟ್ಟಿದ್ದಾರೆ.
ಹಾಡಿಗೆ ತಮ್ಮದೇ ಆದ ಹಿಂದಿ ಅವತರಣಿಕೆ ತಂದಿರುವ ಬಾಬಾ ಸಹಗಲ್, ’ಪ್ರೋಟೀನ್’ ಹೆಸರಿನಲ್ಲಿ ಈ ಹಾಡನ್ನು ಹೊರತಂದಿದ್ದು ಅದೀಗ ವೈರಲ್ ಆಗಿದೆ.
ಮಾಸ್ಕ್ ಧರಿಸಿಕೊಂಡು, ಆಗಾಗ ಕೈ ತೊಳೆದುಕೊಳ್ಳುವುದು ಎಷ್ಟು ಮುಖ್ಯವೆಂದು ಬಾಬಾ ಸೆಹಗಲ್ ಅವರು ತಮ್ಮ ಹಾಡಿನ ಲಿರಿಕ್ಸ್ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಈ ಹಾಡಿನ ಮೂಲಕ ಸಹಗಲ್ ಅವರು ಟ್ರೆಂಡ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.