ದೇಶದಲ್ಲಿ ಡೆಡ್ಲಿ ವೈರಸ್ ತನ್ನ ಅಟ್ಟಹಾಸ ಮುಂದುವರಿಸಿದೆ. ಈಗಾಗಲೇ ವೈದ್ಯಕೀಯ ಸೌಲಭ್ಯಗಳ ಅಭಾವದಿಂದಾಗಿ ಆರೋಗ್ಯ ಸಿಬ್ಬಂದಿ ಸೋಂಕಿತರನ್ನ ಕಾಪಾಡುವಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಇಲ್ಲಿಯವರೆಗೆ ತಮ್ಮ ಸ್ವಂತ ಖರ್ಚಿನಲ್ಲಿ ರೆಮಿಡಿಸಿವರ್, ಆಕ್ಸಿಜನ್ ಸಿಲಿಂಡರ್ಗಳ ವ್ಯವಸ್ಥೆ ಮಾಡುತ್ತಿದ್ದ ಸೋಂಕಿತರ ಕುಟುಂಬಸ್ಥರು ಇದೀಗ ವೆಂಟಿಲೇಟರ್ ಖರೀದಿಗೂ ಮುಂದಾಗಿದ್ದಾರೆ.
ಇಂತಹ ವೈದ್ಯಕೀಯ ಉಪಕರಣಗಳನ್ನ ಖರೀದಿ ಮಾಡೋದು ಜನ ಸಾಮಾನ್ಯರ ಬಳಿ ಆಗುವಂತಹ ಕೆಲಸವಲ್ಲ. ಆದರೂ ಸಹ ಕುಟುಂಬಸ್ಥರನ್ನ ಉಳಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಜನರು ವೆಂಟಿಲೇಟರ್ಗಳನ್ನೂ ಖರೀದಿ ಮಾಡ್ತಿದ್ದಾರೆ.
ಪತಂಜಲಿ ಸ್ಟೋರ್ ನಲ್ಲಿ ಔಟ್ ಆಫ್ ಸ್ಟಾಕ್ ಆಗಿದೆ ಈ ಮಾತ್ರೆ
ಅಹಮದಾಬಾದ್ ನಿವಾಸಿಯಾಗಿರುವ ಮನೀಷ್ ಪಟೇಲ್ ಎಂಬವರು ತಮ್ಮ ಪತ್ನಿಯ ಸಹೋದರ ಪವನ್ ಎಂಬವರನ್ನ ಸೋಂಕಿನಿಂದ ಕಾಪಾಡಬೇಕು ಅಂತಾ ವೆಂಟಿಲೇಟರ್ನ್ನು ಖರೀದಿ ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಮನೀಷ್, 26 ವರ್ಷದ ಪವನ್ ಜೀವನ ಕಾಪಾಡಲು ನಾನು ಕೈಮೀರಿ ಪ್ರಯತ್ನಿಸುತ್ತಿದ್ದೇನೆ. ಕೆಲ ದಿನಗಳ ಹಿಂದಷ್ಟೇ ಸ್ವಂತ ಖರ್ಚಿನಲ್ಲಿ BiPAP ಮಷಿನ್ ಖರೀದಿಸಿದ್ದೆವು. ಇದೀಗ ವೆಂಟಿಲೇಟರ್ ಖರೀದಿಗೂ ಮುಂದಾಗಿದ್ದೇವೆ ಎಂದ್ರು.