ಈಗಾಗಲೇ ದೇಹದಲ್ಲಿರುವ ಆಲ್ಕೋಹಾಲ್ ಮಟ್ಟ ಹಾಗೂ ಗ್ಲುಕೋಸ್ ಪ್ರಮಾಣವನ್ನ ಕಂಡುಹಿಡಿಯಬಲ್ಲ ಸೌಲಭ್ಯವುಳ್ಳ ಆಪಲ್ ವಾಚ್ಗಳನ್ನ ಮಾರುಕಟ್ಟೆಗೆ ತರೋಕೆ ಮುಂದಾಗಿದ್ದ ಐ ಫೋನ್ ಕಂಪನಿ ಈ ವಾಚ್ನಲ್ಲಿ ರಕ್ತದೊತ್ತಡದ ಪ್ರಮಾಣವನ್ನೂ ಹೇಳುವ ಸಾಧನವನ್ನ ಅಳವಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕ್ಯುಪರ್ಟಿನೋ ಮೂಲದ ಕಂಪನಿ ರಕ್ತದೊತ್ತಡವನ್ನ ತಿಳಿಸುವ ಸೆನ್ಸಾರ್ಗಳನ್ನ ಆಪಲ್ ವಾಚ್ಗಳಲ್ಲಿ ಅಳವಡಿಸಲು ಬ್ರಿಟಿಷ್ ಎಲೆಕ್ಟ್ರಾನಿಕ್ಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಈ ಹೊಸ ಮಾಡೆಲ್ ವಾಚ್ಗಳನ್ನ ಆಪಲ್ ಕಂಪನಿ ಯಾವಾಗ ಲಾಂಚ್ ಮಾಡಲಿದೆ ಅನ್ನೋದಕ್ಕೆ ನಿಗದಿತ ದಿನಾಂಕ ಪ್ರಕಟವಾಗಿಲ್ಲ.
ಭವಿಷ್ಯದಲ್ಲಿ ಲಾಂಚ್ ಆಗಲಿರುವ ಆಪಲ್ ವಾಚ್ಗಳಲ್ಲಿ ಗ್ಲುಕೋಸ್ ಹಾಗೂ ಆಲ್ಕೋಹಾಲ್ ಮಟ್ಟ ತಿಳಿಸುವ ಸೌಲಭ್ಯ ಇರಲಿದೆ ಎಂದು ಈಗಾಗಲೇ ಹೇಳಿತ್ತು. ಇದೀಗ ರಕ್ತದೊತ್ತಡವನ್ನ ಅಳೆಯುವ ಸೆನ್ಸಾರ್ನ್ನೂ ವಾಚ್ಗಳಿಗೆ ಅಳವಡಿಸಲಿದೆ.