ತನ್ನ ಮನೆಯ ಗಾರ್ಡನ್ನಲ್ಲಿ ಹಾಲಿನ ಬಾಟಲಿ ಸಿಕ್ಕಿದೆ ಎಂದುಕೊಂಡ ನ್ಯಾಯಾಧೀಶರು ಬಳಿಕ ಇದು ಎರಡನೇ ವಿಶ್ವ ಯುದ್ಧದಲ್ಲಿ ಬಳಕೆ ಮಾಡಲಾಗಿದ್ದ ಗ್ರೆನೇಡ್ಗಳು ಎಂದು ತಿಳಿದು ಶಾಕ್ ಆಗಿದ್ದಾರೆ.
ಜೇಮ್ಸ್ ಒಸ್ಬೋರ್ನ್ ಎಂಬವರು ತಮ್ಮ ಮನೆಯಿಂದ ಹತ್ತಿರದಲ್ಲೇ ಇದ್ದ ರಾಷ್ಟ್ರೀಯ ಉದ್ಯಾನವನದಲ್ಲಿ 48 ಸ್ಪೋಟಕಗಳನ್ನ ಕಂಡಿದ್ದಾರೆ. ಈ ಸ್ಪೋಟಕಗಳು ಇದ್ದ ಜಾಗದಿಂದ ಸಮೀಪದಲ್ಲಿ ಜೇಮ್ಸ್ ಬೆಂಕಿಯನ್ನ ಹಚ್ಚಿದ್ದರಂತೆ.
ಈ ಸ್ಪೋಟಕಗಳು ಬಾಂಬ್ ಆಗಿದ್ದು ಇದನ್ನ ವಿಶ್ವಯುದ್ಧದ ಸಂದರ್ಭದಲ್ಲಿ ಹೋಮ್ ಗಾರ್ಡ್ಗಳಿಗೆ ಸ್ವಯಂ ರಕ್ಷಣೆಗಾಗಿ ವಿತರಿಸಲಾಗುತ್ತಿತ್ತು ಎನ್ನಲಾಗಿದೆ.
45 ವರ್ಷದ ಒಸ್ಬೋರ್ನ್ ಈ ಸಕ್ರಿಯ ಬಾಂಬ್ಗಳನ್ನ ಕಂಡು ಹಿಡಿದಿದ್ದಾರೆ. ಅವರ ಆರು ಎಕರೆ ಜಾಗದಲ್ಲಿ ಈ ಬಾಂಬ್ನ್ನು ಪತ್ತೆ ಮಾಡಿದ್ದಾರೆ.