ಮದುವೆ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿಯೇ ಹಸುವೊಂದು ಕರುವಿಗೆ ಜನ್ಮ ನೀಡಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 32 ವರ್ಷದ ಜೆಸ್ಸಾ ಲಾವ್ಸ್ ಹಾಗೂ 38 ವರ್ಷದ ಬೆಲ್ ಲಾವ್ಸ್ರ ಮದುವೆ ಕಾರ್ಯಕ್ರಮದ ನಡೆಯುತ್ತಿರುವಾಗಲೇ ಹಸು ಕರುವಿಗೆ ಜನ್ಮ ನೀಡಿದೆ. 100ಕ್ಕೂ ಹೆಚ್ಚು ಅತಿಥಿಗಳ ನಡುವೆಯೇ ಹಸು ಕರುವಿಗೆ ಜನ್ಮ ನೀಡಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಜೆಸ್ಸಾ, ಈ ಘಟನೆಯಿಂದಾಗಿ ನನ್ನ ಗೌನ್ ಸಂಪೂರ್ಣವಾಗಿ ಹಾಳಾಗಿತ್ತು. ಆದರೂ ಇದೊಂದು ಮರೆಯಲಾಗದ ಅನುಭವವಾಗಿದೆ ಎಂದು ಹೇಳಿದ್ದಾರೆ.
ಹೆರಿಗೆ ಬಳಿಕ ತಾಯಿ, ಕರು ಕ್ಷೇಮವಾಗಿದೆ. ಇನ್ನು ಮದುವೆ ಕಾರ್ಯಕ್ರಮದಲ್ಲಿ ಜನಿಸಿದ ಕರುವಿಗೆ ಡೆಸ್ಟಿನಿ ಎಂದು ಹೆಸರಿಡಲಾಗಿದೆ.
ವಿಶೇಷ ಅಂದರೆ ಮೂರು ವರ್ಷಗಳ ಹಿಂದೆ ಭೇಟಿಯಾಗಿದ್ದ ಈ ಜೋಡಿ ಹಸುವಿನ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದರಂತೆ. ಜೆಸ್ಸಿಯ ಮದುವೆ ಡ್ರೆಸ್ನ್ನು ಡ್ರೈವಾಶ್ಗೆ ನೀಡಲಾಗಿದ್ದು ಅದರ ಮೇಲಿರುವ ಕಲೆಯೆಲ್ಲಾ ಸರಿಯಾಗಲಿದೆ ಎಂದು ನಂಬಲಾಗಿದೆ. ಆದರೆ ಜೆಸ್ಸಿ ನನಗೆ ಅಚ್ಚುಕಟ್ಟಾದ ಗೌನ್ಗಿಂತ ನೆನಪುಗಳನ್ನ ತುಂಬಿರುವ ಈ ಗೌನ್ ಹೇಗಿದ್ದರೂ ಇಷ್ಟ ಎಂದು ಹೇಳಿದ್ದಾರೆ.