ಬ್ರಿಟನ್ ನಲ್ಲಿ ನವಜಾತ ಶಿಶುವಿನ ಜನನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ಟನ್ ಸಿಟಿಯಲ್ಲಿ 21 ವರ್ಷದ ಯುವತಿ ಸುಮಾರು ಆರು ಕೆ.ಜಿ. ತೂಕದ ನವಜಾತ ಶಿಶುವಿಗೆ ಜನ್ಮ ನೀಡಿದ್ದಾಳೆ. 21 ವರ್ಷದ ಅಂಬರ್ ಕಂಬರ್ಲ್ಯಾಂಡ್‌ಗೆ ಹೆರಿಗೆ ನೋವು ಕಾಣಿಸಿಕೊಳ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವತಿ ಹೊಟ್ಟೆಯಲ್ಲಿ ಅವಳಿ ಮಕ್ಕಳಿವೆ ಎಂದು ಭಾವಿಸಲಾಗಿತ್ತು. ಆದ್ರೆ ಅಂಬರ್ ಹೊಟ್ಟೆಯಲ್ಲಿದ್ದ ಮಗು ನೋಡಿ ವೈದ್ಯರು ಅಚ್ಚರಿಗೊಳಗಾಗಿದ್ದಾರೆ.
ಕಳೆದ ತಿಂಗಳು ಏಪ್ರಿಲ್ 16 ರಂದು ಹೆರಿಗೆಯಾಗಿದೆ. ಈ ಘಟನೆ ನಂತ್ರ ಪೋಷಕರು ದಂಗಾಗಿದ್ದಾರೆ. ಆಕೆಗೆ ಅವಳಿ ಮಕ್ಕಳಿವೆ ಎಂದು ಆರಂಭದಲ್ಲಿ ವೈದ್ಯರು ತಿಳಿಸಿದ್ದರು. ಅಲ್ಟ್ರಾಸೌಂಡ್ ವೇಳೆಯೂ ಅವಳಿ ಮಕ್ಕಳಿರುವಂತೆ ಕಂಡು ಬಂದಿತ್ತಂತೆ. ಇದಕ್ಕೆ ಅಂಬರ್ ತಯಾರಿ ನಡೆಸಿದ್ದಳಂತೆ. ಆದ್ರೆ ಒಂದೇ ಮಗು ಇರುವುದು ಆಕೆಯನ್ನೂ ಅಚ್ಚರಿಗೊಳಿಸಿದೆ.
ತಾಯ್ತನಕ್ಕೆ ಅಡ್ಡಿ ಬರಲಿಲ್ಲ ಅಂಗವೈಕಲ್ಯ..! ಒಂದೇ ಕೈ ಹೊಂದಿದ್ದರೂ ಮೂರು ಮಕ್ಕಳ ಪೋಷಣೆ ಮಾಡುತ್ತಿರುವ ಮಹಾತಾಯಿ
ಯುಕೆ ವೈದ್ಯಕೀಯ ತಜ್ಞರ ಪ್ರಕಾರ, ಇದು ಎರಡನೇ ಅತ್ಯಂತ ತೂಕದ ಮಗು. ಇದಕ್ಕೂ ಮೊದಲು 2012 ರಲ್ಲಿ ಬ್ರಿಟನ್‌ನಲ್ಲಿ ಹೆಣ್ಣು ಮಗು ಜನಿಸಿತ್ತು. ಆ ಹುಡುಗಿಯ ತೂಕ ಆರೂವರೆ ಕೆ.ಜಿಯಿತ್ತು.