alex Certify ಹೆಚ್​ಐವಿ ನಿಯಂತ್ರಣಕ್ಕೆ ಕಾಂಡೋಮ್​ ಹೇಗೆ ಮುಖ್ಯವೋ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್​ ಅನಿವಾರ್ಯ:‌ ʼಲಾಕ್‌ ಡೌನ್‌ʼ ಕುರಿತೂ ತಜ್ಞರಿಂದ ಮಹತ್ವದ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್​ಐವಿ ನಿಯಂತ್ರಣಕ್ಕೆ ಕಾಂಡೋಮ್​ ಹೇಗೆ ಮುಖ್ಯವೋ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್​ ಅನಿವಾರ್ಯ:‌ ʼಲಾಕ್‌ ಡೌನ್‌ʼ ಕುರಿತೂ ತಜ್ಞರಿಂದ ಮಹತ್ವದ ಅಭಿಪ್ರಾಯ

ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿ ನಿತ್ಯ ಮೂರು ಲಕ್ಷಕ್ಕೂ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕು ಮಿತಿಮೀರಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಹಾಗೂ ಉತ್ತರ ಪ್ರದೇಶದಂತಹ ರಾಜ್ಯಗಳು ಕೋವಿಡ್​ ಚೈನ್​ ಮುರಿಯಲು ಸಾಕಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿವೆ.

ರಾಜ್ಯದಲ್ಲಿ ಲಾಕ್​ಡೌನ್​ನಂತಹ ನಿರ್ಧಾರಗಳನ್ನ ಸರ್ಕಾರಗಳು ತೆಗೆದುಕೊಂಡಿದ್ದು ಜನರ ಸಂಪರ್ಕ ಕಡಿಮೆ ಮಾಡುವ ಯತ್ನದಲ್ಲಿದೆ. ಈ ನಡುವೆ ವಿಜ್ಞಾನಿಗಳ ಗುಂಪೊಂದು ಜನರ ನಡುವಿನ ಸಂಪರ್ಕ ತಡೆಯುವ ಬದಲು ಜನರ ನಡುವಿನ ಸಂಪರ್ಕ ಸುರಕ್ಷಿತವಾಗಿರುವಂತೆ ಕ್ರಮ ಕೈಗೊಳ್ಳೋದು ಹೆಚ್ಚು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಖ್ಯಾತ ವೈರಾಲಜಿಸ್ಟ್​ ಹಾಗೂ ಅನುಭವಿ ಲಸಿಕೆ ಸಂಶೋಧಕ ಡಾ. ತೆಕ್ಕೆಕರ ಜಾಕೋಬ್​ ಜಾನ್​, ಹೆಚ್​ಐವಿ ಮಾದರಿಯಲ್ಲೇ ಜನರು ಹಾಗೂ ಸರ್ಕಾರ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ಹೆಚ್​ಐವಿ ನಿಮಗೆ ಬಾಧಿಸಿದ್ರೆ ಏನು ಮಾಡಿತ್ತೀರಿ..? ಲೈಂಗಿಕ ಕ್ರಿಯೆಯಲ್ಲಿ ಭಾಗಿ ಆಗುವ ಹಾಗಿಲ್ಲ ಅಥವಾ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬೇಕು. ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ನೀವು ಕಾಂಡೋಮ್​ನಂತಹ ಸಾಧನಗಳನ್ನ ಬಳಕೆ ಮಾಡುತ್ತೀರಿ. ಅದೇ ರೀತಿ ಮಾಸ್ಕ್​ ಹಾಕಿಕೊಳ್ಳುವುದು ಸರಿಯಾದ ಮಾರ್ಗವೇ ಹೊರತು ಲಾಕ್​ಡೌನ್​ ಅಲ್ಲ ಎಂದು ಡಾ. ಜಾನ್​ ಹೇಳಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ದೇಶದಲ್ಲಿ ಲಾಕ್​ಡೌನ್​ ಜಾರಿಗೆ ತಂದ ಸಂದರ್ಭದಲ್ಲೂ ಸರ್ಕಾರದ ಈ ಕ್ರಮವನ್ನ ಜಾನ್​ ವಿರೋಧಿಸಿದ್ದರು. ಸಾಮಾಜಿಕ ಸಂಪರ್ಕ ಕಡಿಮೆಯಾಗುತ್ತಾ ಹೋದಂತೆ ಜನರ ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಜನರಿಗೆ ಲಾಕ್​ಡೌನ್​ ಮಾಡಿ ನಿರ್ಬಂಧ ಹೇರುವ ಬದಲು ಮಾಸ್ಕ್​ ಕಡ್ಡಾಯ ಧರಿಸುವ ಬಗ್ಗೆ ಸರಿಯಾದ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಸ್ಪುಟ್ನಿಕ್​​ ವಿ ಲಸಿಕೆ ಸಲಹಾ ಮಂಡಳಿಯಲ್ಲಿರುವ ಖ್ಯಾತ ವೈರಲಾಜಿಸ್ಟ್​​ ಪ್ರೊ. ವಸಂತಪುರಂ ರವಿ ಕೂಡ ಲಾಕ್​ಡೌನ್​ ಕೊರೊನಾಗೆ ಪರಿಹಾರವಲ್ಲ ಅಲ್ಲದೇ ಇದೊಂದು ಅವೈಜ್ಞಾನಿಕ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒತ್ತಡ ಹೇರಿದ ಮಾತ್ರಕ್ಕೆ ಜನರ ನಡವಳಿಕೆಯಲ್ಲಿ ಬದಲಾವಣೆ ಆಗೋದಿಲ್ಲ. ಹೆಚ್​ಐವಿ ಆರಂಭಿಕ ದಿನಗಳಲ್ಲೂ ಕೊರೊನಾದಲ್ಲಿ ಮಾಸ್ಕ್​ ಹಾಕಲು ನಿರಾಕರಿಸಿದಂತೆ ಜನರು ಕಾಂಡೋಮ್​ ಹಾಕಿಕೊಳ್ಳಲೂ ಸಹ ಒಪ್ಪಿರಲಿಲ್ಲ. ಈ ಸಮಯದಲ್ಲಿ ಜನರಿಗೆ ಲೈಂಗಿಕ ಕ್ರಿಯೆ ಮಾಡದೇ ಇರೋದಕ್ಕಿಂತ ಸುರಕ್ಷಿತ ಲೈಂಗಿಕ ಕ್ರಿಯೆ ಸೂಕ್ತ ಎಂದು ಜನರಿಗೆ ತಿಳಿ ಹೇಳಲಾಗಿತ್ತು ಎಂದು ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ವೈರಸ್​ ವಿಜ್ಞಾನಿ ಪ್ರೊ. ರಾಮಸ್ವಾಮಿ ಪಿಟ್ಚಪ್ಪನ್​, ಲಾಕ್​ಡೌನ್​ನಿಂದ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗುತ್ತಿದೆ. ಇದರಿಂದ ಯಾವುದೇ ಲಾಭವಿಲ್ಲ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...