ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಆಂಧ್ರ ಬ್ಯಾಂಕ್ ಹಾಗೂ ಅಲಹಾಬಾದ್ ಬ್ಯಾಂಕ್ನ ಗ್ರಾಹಕರು ಬ್ಯಾಂಕಿಂಗ್ ವ್ಯವಹಾರಕ್ಕೆ ಹೊಸ ಐಎಫ್ಎಸ್ಸಿ ಕೋಡ್ಗಳನ್ನ ಬಳಕೆ ಮಾಡೋದು ಒಳಿತು. ನೀವೇನಾದರೂ ಇನ್ನೂ ಹಳೆಯ ಐಎಫ್ಎಸ್ಸಿ ಕೋಡ್ಗಳನ್ನೇ ಬಳಕೆ ಮಾಡುತ್ತಿದ್ದರೆ ನಿಮ್ಮ ವ್ಯವಹಾರಗಳು ವಿಫಲಗೊಳ್ಳಲಿವೆ.
ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಸಂಬಂಧ ಮಹತ್ವದ ಸೂಚನೆಯೊಂದನ್ನ ನೀಡಿದೆ. ಆರ್ಬಿಐನ ಸೂಚನೆಯಂತೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಐಎಫ್ಎಸ್ಸಿ ಕೋಡ್ಗಳನ್ನ ನಿಷ್ಕ್ರಿಯಗೊಳಿಸಲಾಗಿದೆ. ಹೀಗಾಗಿ ಈ ಬ್ಯಾಂಕ್ನ ಐಎಫ್ಎಸ್ಸಿ ಕೋಡ್ ಬಳಸಿ ನಡೆಸಲಾಗುವ ವ್ಯವಹಾರಗಳು ತಿರಸ್ಕೃತವಾಗಲಿದೆ. ಹೀಗಾಗಿ ದಯಮಾಡಿ ಹೊಸ ಐಎಫ್ಎಸ್ಸಿ ಕೋಡ್ನ್ನು ಡಿ ರಿಜಿಸ್ಟರ್ ಮಾಡಿ ಎಂದು ಕೋರಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2019ರಲ್ಲಿ ಬರೋಬ್ಬರಿ 10 ಸಾರ್ವಜನಿಕ ಬ್ಯಾಂಕ್ಗಳನ್ನ ವಿಲೀನಗೊಳಿಸಿದ್ದರು. ಈ ಘೋಷಣೆಯ ಭಾಗವಾಗಿ ಏಪ್ರಿಲ್ 1ನೇ ತಾರೀಖಿನಿಂದ ಈ ಬ್ಯಾಂಕ್ಗಳ ಐಎಫ್ಎಸ್ಸಿ ಕೋಡ್ಗಳು ಬದಲಾಗಿದೆ. ಹೀಗಾಗಿ ಹಳೆಯ ಐಎಫ್ಎಸ್ಸಿ ಕೋಡ್ಗಳನ್ನ ಬಳಕೆ ಮಾಡಿದವರ ವ್ಯವಹಾರಗಳು ನಿಷ್ಕ್ರಿಯಗೊಳ್ಳುತ್ತದೆ.