alex Certify ಹೋಮ್​ ಐಸೋಲೇಷನ್​ನಲ್ಲಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಮ್​ ಐಸೋಲೇಷನ್​ನಲ್ಲಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ

ಕೊರೊನಾ ವೈರಸ್​ ಕೇಸ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಆಸ್ಪತ್ರೆಗಳಲ್ಲಿ ಬೆಡ್​ ಅಭಾವ, ವೈದ್ಯಕೀಯ ಆಮ್ಲಜನಕದ ಅಭಾವ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೋರಿದೆ. ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯ ಹೋಮ್​ ಐಸೋಲೇಷನ್​ಲ್ಲಿರುವ ಕೊರೊನಾ ಸೋಂಕಿತರಿಗೆ ಹೊಸ ಮಾರ್ಗಸೂಚಿಗಳನ್ನ ಜಾರಿಗೆ ತಂದಿದೆ.

ಈ ಮಾರ್ಗಸೂಚಿಯ ಪ್ರಕಾರ ಸೌಮ್ಯ ಹಾಗೂ ಲಕ್ಷಣ ರಹಿತ ಸೋಂಕನ್ನ ಹೊಂದಿರುವವರಿಗೆ ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಈ ಕೆಳಗಿನಂತಿದೆ :

1. ವೈದ್ಯಕೀಯ ಅಧಿಕಾರಿಯ ಬಳಿ ಸೋಂಕಿತ ಸೌಮ್ಯ ಇಲ್ಲ ಲಕ್ಷಣವೇ ಇಲ್ಲದಿರುವ ಬಗ್ಗೆ ದೃಢೀಕರಣ ಪಡೆಯಬೇಕು.

2. ಐಸೋಲೇಷನ್​​ಗೆ ಒಳಗಾಗಲು ನಿವಾಸದಲ್ಲಿ ಪ್ರತ್ಯೇಕ ಕೋಣೆ ಸೇರಿದಂತೆ ಅಗತ್ಯ ಸೌಲಭ್ಯ ಹೊಂದಿರಬೇಕು.

3. 24 ಗಂಟೆಯೂ ರೋಗಿಯ ಕಾಳಜಿ ಮಾಡಲು ಯಾರಾದರೂ ಇರಬೇಕು. ಹೋಮ್​ ಐಸೋಲೇಷನ್​​ನಲ್ಲಿ ಇರುವ ವೇಳೆ ಕೆಲ ಮಾನದಂಡಗಳನ್ನ ಪಾಲಿಸಬೇಕು.

4. 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ, ಲಿವರ್​, ಕಿಡ್ನಿ ಸಮಸ್ಯೆ ಹೊಂದಿರುವವರು ಸರಿಯಾಗಿ ವೈದ್ಯಾಧಿಕಾರಿಯ ನಿಗಾದಲ್ಲಿರಬೇಕು.

5 . ಹೆಚ್​ಐವಿ ಹಾಗೂ ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗಿರುವ ಸೋಂಕಿತರಿಗೆ ಹೋಮ್​ ಐಸೋಲೇಷನ್​ನಲ್ಲಿ ಇರಲು ಅವಕಾಶವಿಲ್ಲ. ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗಲಿದೆ ಎಂದು ದೃಢವಿದ್ದರೆ ಮಾತ್ರ ಐಸೋಲೇಷನ್​ ಆಯ್ಕೆ ನೀಡಬಹುದು.

6. ವೈದ್ಯಾಧಿಕಾರಿಯ ಸೂಚನೆಯಂತೆ ಸೋಂಕಿತರ ಕಾಳಜಿ ವಹಿಸುವವರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಹೈಡ್ರೋಕ್ಸಿಕ್ಲೋರೋಕ್ವಿನ್​​ ಪ್ರೊಪೈಲ್ಯಾಕ್ಸಿಸ್​ ಸೇವಿಸಬೇಕು.

ಡೇಟಿಂಗ್​ ಆಪ್​ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ….? ಹಾಗಾದ್ರೆ ʼಲಸಿಕೆʼ ಸ್ವೀಕರಿಸುವುದು ಅನಿವಾರ್ಯ

ರೋಗಿಗಳಿಗೆ ಇರುವ ಮಾರ್ಗಸೂಚಿ :

1. ಸೋಂಕಿತ ವ್ಯಕ್ತಿ ಮನೆಯವರಿಂದ ಪ್ರತ್ಯೇಕವಾಗಿ ಇರಬೇಕು. ಅದರಲ್ಲೂ ಮನೆಯಲ್ಲಿ ರಕ್ತದೊತ್ತಡ ಸೇರಿದಂತೆ ವಿವಿಧ ಗಂಭೀರ ಕಾಯಿಲೆ ಇರುವ ವೃದ್ಧರ ಜೊತೆ ಸಂಪರ್ಕದಲ್ಲಿ ಇರುವಂತೆಯೇ ಇಲ್ಲ.

2. ಸರಿಯಾಗಿ ಗಾಳಿಯಾಡುವಂತಹ ಕೋಣೆಯಲ್ಲಿಯೇ ಸೋಂಕಿತರನ್ನ ಇಡಬೇಕು.

3. ಸೋಂಕಿತರು ಮೂರು ಲೇಯರ್​ ಮೆಡಿಕಲ್​ ಮಾಸ್ಕ್​ಗಳನ್ನೇ ಧರಿಸಬೇಕು. 8 ಗಂಟೆಗಳಿಗೊಮ್ಮೆ ಮಾಸ್ಕ್​ಗಳನ್ನ ಬದಲಾಯಿಸಬೇಕು. ಕಾಳಜಿ ತೆಗೆದುಕೊಳ್ಳುವವರು ಸಹ ಕೋಣೆಗೆ ಬರುವ ಮುನ್ನ ಎನ್​ 95 ಮಾಸ್ಕ್​​​ ಧರಿಸಬೇಕು.

4. 1 ಪರ್ಸೆಂಟ್​ ಸೋಡಿಯಂ ಹೈಪೋಕ್ಲೋರೈಟ್​ನಿಂದ ಮಾಸ್ಕ್​ಗಳನ್ನ ಸೋಂಕು ರಹಿತ ಮಾಡಿ ಬಳಿಕ ಅದನ್ನು ನಾಶ ಮಾಡಬೇಕು.

5. ರೋಗಿಗಳು ವಿಶ್ರಾಂತಿ ಪಡೆಯುತ್ತಿರಬೇಕು ಹಾಗೂ ದ್ರಾವಣ ಹೆಚ್ಚಿರುವ ಆಹಾರ ಸೇವಿಸಬೇಕು.

6. ಎಲ್ಲಾ ಸಮಯದಲ್ಲೂ ಉಸಿರಾಟದ ಶಿಷ್ಟಾಚಾರಗಳನ್ನ ಪಾಲಿಸಬೇಕು.

7. 40 ಸೆಕೆಂಡ್​ಗಳ ಕಾಲ ಸೋಪು ಇಲ್ಲವೇ ಆಲ್ಕೋಹಾಲ್​ ಇರುವ ಸ್ಯಾನಿಟೈಸರ್​ಗಳಿಂದ ಕೈ ತೊಳೆದುಕೊಳ್ಳಿ.

8. ಸೋಂಕಿತರು ತಮ್ಮ ವೈಯಕ್ತಿಕ ವಸ್ತುಗಳನ್ನ ಇನ್ನೊಬ್ಬರ ಜೊತೆ ಹಂಚಿಕೊಳ್ಳುವಂತಿಲ್ಲ.

9. 1 ಪರ್ಸೆಂಟ್​ ಹೈಪೋಕ್ಲೋರೈಟ್​ ಸೊಲ್ಯೂಷನ್​ನಿಂದ ಕೋಣೆಯ ಪ್ರತಿಯೊಂದು ಮೂಲೆಯನ್ನ ಸ್ವಚ್ಛ ಮಾಡಬೇಕು.

10. ಆಕ್ಸಿಮೀಟರ್​ನ ಸಹಾಯದಿಂದ ಆಗಾಗ ಆಮ್ಲಜನಕ ಮಟ್ಟವನ್ನ ಪರೀಕ್ಷೆ ಮಾಡುತ್ತಿರಬೇಕು.

11. ಸೋಂಕಿತ ವ್ಯಕ್ತಿ ಪ್ರತಿ ದಿನ ದೇಹದ ತಾಪಮಾನವನ್ನ ಪರೀಕ್ಷೆ ಮಾಡಿಕೊಳ್ಳಬೇಕು.

ಆಸ್ಪತ್ರೆಗೆ ದಾಖಲಾಗೋದು ಯಾವಾಗ :

1. ಉಸಿರಾಟದ ತೊಂದರೆ.

2. ಆಮ್ಲಜನಕ ಮಟ್ಟ ಇಳಿಕೆಯಾಗುವುದು.

3. ಎದೆಯಲ್ಲಿ ನೋವು ಕಾಣಿಸಿಕೊಂಡಾಗ.

4. ಮಾನಸಿಕವಾಗಿ ಆರೋಗ್ಯ ಹದಗೆಡುತ್ತಿದೆ ಎನಿಸಿದಾಗ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...