ದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನ ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಭಾರತದಿಂದ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಈ ನಡುವೆ ಐಪಿಎಲ್ ನಿಮಿತ್ತ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗರು ತಾಯ್ನಾಡಿಗೆ ವಾಪಸ್ಸಾಗಲು ತಮ್ಮ ಸ್ವಂತ ವ್ಯವಸ್ಥೆಯನ್ನ ಮಾಡಿಕೊಳ್ಳಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ರು.
ಆಸ್ಟ್ರೇಲಿಯಾ ಇಂದು ಭಾರತದಿಂದ ಎಲ್ಲಾ ಪ್ರಯಾಣಿಕ ವಿಮಾನಗಳ ಆಸ್ಟ್ರೇಲಿಯಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಮೇ 15ರವರೆಗೂ ಈ ತಾತ್ಕಾಲಿಕ ನಿರ್ಬಂಧ ಮುಂದುವರಿಯಲಿದೆ ಎಂದು ಪ್ರಕಟಣೆ ಹೊರಡಿಸಿದೆ.
ಈ ಬಳಿಕ ಆಸಿಸ್ ಕ್ರಿಕೆಟಿಗರ ವಿಚಾರವಾಗಿ ಮಾತನಾಡಿದ ಸ್ಕಾಟ್ ಮಾರಿಸನ್, ಆಸಿಸ್ ಆಟಗಾರರು ತಮ್ಮ ವೈಯಕ್ತಿಕ ಕಾರಣದಿಂದಾಗಿ ಈ ಪ್ರವಾಸವನ್ನ ಕೈಗೊಂಡಿದ್ದಾರೆ. ಇದು ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸ ಅಲ್ಲ. ಅವರು ತಮ್ಮ ಸ್ವಂತ ಖರ್ಚಿನಲ್ಲಿ ಭಾರತಕ್ಕೆ ತೆರಳಿದ್ದಾರೆ ಹಾಗೂ ಸ್ವಂತ ಖರ್ಚಿನಲ್ಲೇ ವಾಪಸ್ಸಾಗಬೇಕು ಎಂದು ಹೇಳಿದ್ರು.
ಮೂವರು ಆಸ್ಟ್ರೇಲಿಯಾ ಆಟಗಾರರಾದ ಆಂಡ್ರ್ಯೂ ಟೈ, ಕೇನ್ ರಿಚರ್ಡ್ಸನ್ ಹಾಗೂ ಆಡಮ್ ಝಂಪಾ ಆರೋಗ್ಯ ಕಾರಣದಿಂದಾಗಿ ಲೀಗ್ನಿಂದ ಹೊರನಡೆದಿದ್ದಾರೆ. ಆದರೆ ಇವರನ್ನ ಹೊರತುಪಡಿಸಿ ಇನ್ನೂ 14 ಮಂದಿ ಆಸ್ಟ್ರೇಲಿಯಾ ಆಟಗಾರರು ಐಪಿಎಲ್ನಲ್ಲಿ ಆಡುತ್ತಿದ್ದಾರೆ.