ಕಡಲಿನ ಒಡಲಲ್ಲಿ ಹೊಸದೊಂದು ಜಗತ್ತೇ ಇದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಕಡಲಿನಲ್ಲಿ ಈಜುವವರಿಗೆ ಮಾತ್ರ ಇದರ ಮಜಾ ತಿಳಿದಿರುತ್ತೆ. ಇದೇ ರೀತಿ ಸಮುದ್ರದಲ್ಲಿ ಈಜಲು ತೆರಳಿದ್ದ ಸ್ಟೀವ್ ಮಾರಿಸ್ ಅತ್ಯದ್ಭುತ ಜಲಚರವನ್ನ ಕಣ್ತುಂಬಿಕೊಂಡಿದ್ದಾರೆ.
ಏಪ್ರಿಲ್ 18ರಂದು ನ್ಯೂಜಿಲೆಂಡ್ನ ಬೇ ಆಫ್ ಪ್ಲೆಂಟಿಯಲ್ಲಿ ಕಡಲಾಳದಲ್ಲಿ ಈಜುತ್ತಿದ್ದ ವೇಳೆ ಸ್ಟೀವ್ ದೈತ್ಯ ತಿಮಿಂಗಲಕ್ಕೆ ಮುಖಾಮುಖಿಯಾಗಿದ್ದಾರೆ. ಇದರ ಫೂಟೇಜ್ ಕೂಡ ಸ್ಮಿತ್ ಬಳಿ ಇದ್ದ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಇದನ್ನ ಸ್ಟೀವ್ ತಮ್ಮ ಜೀವನದ ಅತ್ಯಂತ ಅಮೂಲ್ಯ ದಿನ ಎಂದು ಬಣ್ಣಿಸಿದ್ದಾರೆ.
ಮಾರಿಸ್ 8 ತಿಮಿಂಗಲಗಳನ್ನ ನೋಡಿದ್ದಾರೆ. ಈ ತಿಮಿಂಗಲಗಳನ್ನ ದೃಶ್ಯವನ್ನ ರೆಕಾರ್ಡ್ ಮಾಡಲು ಸ್ಟೀವ್ ಮುಂದಾದ ವೇಳೆ ಒಂದು ತಿಮಿಂಗಲ ಸ್ಟೀವ್ ಹತ್ತಿರಕ್ಕೇ ಬಂದಿದೆ. ಇದಾದ ಬಳಿಕ ಇನ್ನೆರಡು ತಿಮಿಂಗಲಗಳು ಸಹ ಸ್ಟೀವ್ ಹತ್ತಿರದಲ್ಲಿ ಹಾದು ಹೋಗಿದೆ.
ದೈತ್ಯ ತಿಮಿಂಗಲಗಳು ನನ್ನಿಂದ ಒಂದೆರಡು ಮೀಟರ್ ದೂರದಲ್ಲಿದ್ದವು. ನಾನೆಂದಿಗೂ ನನ್ನ ಜೀವನದಲ್ಲಿ ಕಿಲ್ಲರ್ ತಿಮಿಂಗಲಗಳನ್ನ ಇಷ್ಟು ಸಮೀಪದಿಂದ ನೋಡಿಯೇ ಇರಲಿಲ್ಲ. ಮೊದಲು ನನಗೆ ಭಯವಾಯಿತು. ಬಳಿಕ ಅವು ನನಗೆ ಹೆಲ್ಲೋ ಎಂದು ಹೇಳಲು ಬಂದಿವೆ ಎಂದು ತಿಳಿಯಿತು ಸ್ಟೀವ್ ಹೇಳಿದ್ದಾರೆ.