ಬ್ರಿಟನ್ನ ನಾರ್ಥ್ಅಂಪ್ಟೋಶೈರ್ ಎಂಬ ಪಟ್ಟಣದ ಹಲವಾರು ಮನೆಗಳ ಗೋಡೆಗಳ ಮೇಲೆ ಬಳಪದ ಕಲೆ ಕಾಣಿಸಿಕೊಂಡಿದ್ದು ಜನರು ಆತಂಕಕ್ಕೆ ಒಳಗಾಗಿದ್ರು.
ನಕಲಿ ಸೇಲ್ಸ್ಮ್ಯಾನ್ ಈ ಕೃತ್ಯ ಎಸಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಾಮಾನ್ಯವಾಗಿ ಅವರು ಸ್ಥಳೀಯ ಕಳ್ಳರು ಹಾಗೂ ನಾಯಿ ಕಳ್ಳರ ಜೊತೆ ಸಂಪರ್ಕವನ್ನ ಹೊಂದಿರ್ತಾರೆ.
ಈ ಬಳಪದ ಕಲೆಗಳನ್ನ ಡಸ್ಬೋರಾ ನಿವಾಸಿ ಗೆಮ್ಮಾ ಸ್ಮಾಲ್ಬೋನ್ ಎಂಬವರು ಕಂಡುಹಿಡಿದಿದ್ದಾರೆ. ಮೂಲಗಳ ಪ್ರಕಾರ ಇಂಧನ ಮಾರಾಟಗಾರ ಎಂದು ಹೇಳಿಕೊಂಡ ವ್ಯಕ್ತಿ ಏಪ್ರಿಲ್ 21ರಂದು ನಮ್ಮ ಮನೆಗೆ ಭೇಟಿ ನೀಡಿದ ಬಳಿಕ ಮನೆಯ ಗೋಡೆ ಮೇಲೆ ಈ ಕಲೆ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
ಆತ ನಾನು ವಿದ್ಯುತ್ಗೆ ಹೆಚ್ಚಿನ ಹಣ ಪಾವತಿ ಮಾಡುತ್ತಿದ್ದೇನೆ ಎಂದು ಹೇಳಿದ. ನಾನು ನನ್ನ ಬಳಿ ಹಣವಿಲ್ಲ ನಾನು ಮಾಸಿಕವಾಗಿ ಪಾವತಿ ಮಾಡುತ್ತೇನೆ ಎಂದು ಹೇಳಿದೆ.ಆತ ತುಂಬಾನೇ ಅವಸರದಲ್ಲಿ ಇದ್ದಂತೆ ವರ್ತಿಸುತ್ತಿದ್ದ ಎಂದು ಹೇಳಿದ್ದಾಳೆ.
ಆತ ತುಂಬಾನೇ ವಿಚಿತ್ರವಾಗಿ ವರ್ತಿಸುತ್ತಿದ್ದ. ಆತ ಮನೆಯ ಬಾಗಿಲಿಗೆ ತುಂಬಾನೇ ಹತ್ತಿರದಲ್ಲಿ ನಿಂತಿದ್ದ. ಹಾಗೂ ಮನೆಯ ಒಳಗೆಲ್ಲ ನೋಡುತ್ತಿದ್ದ. ನಾನು ಬಾಗಿಲು ತೆರೆದ ಬಳಿಕವೂ ಆತ ತಾನು ನಿಂತಿದ್ದ ಜಾಗದಿಂದ ಒಂದಿಂಚೂ ಹಿಂದೆ ಹೋಗಿರಲಿಲ್ಲ ಎಂದು ಹೇಳಿದ್ದಾಳೆ.
ಆತನ ವರ್ತನೆ ನನಗೆ ಸರಿ ಕಾಣುತ್ತಿರಲಿಲ್ಲ. ನಾನು ಆತನಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದೆ. ಇದಾದ ಬಳಿಕ ಮನೆಯ ಗೋಡೆಯ ಮೇಲೆ ಬಳಪದ ಕಲೆ ಕಾಣಿಸಿದವು. ನನಗೆ ನನ್ನ ಶ್ವಾನಗಳ ಬಗ್ಗೆ ಭಯವಾಗುತ್ತಿದೆ ಎಂದು ಗೆಮ್ಮಾ ಹೇಳಿದ್ದಾಳೆ.
ಗೆಮ್ಮಾ ಮಾತ್ರವಲ್ಲದೇ ಇನ್ನೂ ಹಲವರು ತಮ್ಮ ಮನೆಯ ಮುಂದೆ ಈ ರೀತಿ ಬಳಪದ ಗೆರೆಗಳನ್ನ ಗುರುತಿಸಿದ್ದಾರೆ. ಅವರ ಮನೆಗಳಿಗೂ ಈ ಸೇಲ್ಸ್ಮ್ಯಾನ್ ಭೇಟಿ ನೀಡಿದ್ದ.