ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ನಾಳೆ ರಾತ್ರಿಯಿಂದ 14 ದಿನಗಳ ಕಾಲ ಲಾಕ್ ಡೌನ್ ಮಾದರಿಯಲ್ಲಿ ಕಠಿಣ ನಿಯಮ ಜಾರಿ ಮಾಡಿದೆ. ಅಗತ್ಯ ವಸ್ತುಗಳ ಖರೀದಿಗೂ ಕೂಡ ಸಮಯ ನಿಗದಿ ಮಾಡಲಾಗಿದೆ. ಹೀಗಾಗಿ ನಾಳೆಯಿಂದ ರಾಜ್ಯದಲ್ಲಿ ಏನೆಲ್ಲ ಲಭ್ಯವಿರುತ್ತೆ. ಏನೆಲ್ಲ ಅಲಭ್ಯ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
* ನಾಳೆಯಿಂದ 14 ದಿನಗಳ ಕಾಲ ಬೆಳಿಗ್ಗೆ 6ರಿಂದ 10ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ
* ಕೆ.ಎಸ್.ಆರ್.ಟಿ.ಸಿ., ಬಿಎಂಟಿಸಿ ಬಸ್ ಸೇರಿದಂತೆ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತ
* ಕ್ಯಾಬ್, ಆಟೋ, ಖಾಸಗಿ ವಾಹನಗಳ ಸಂಚಾರಕ್ಕೂ ನಿಷೇಧ
* ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಸ್ಥಗಿತ
* ಖಾಸಗಿ ವಾಹನ ಸಂಚಾರಕ್ಕೆ ನಿಷೇಧ
* ಗಾರ್ಮೆಂಟ್ಸ್ ಹೊರತುಪಡಿಸಿ ಉಳಿದೆಲ್ಲ ಕಾರ್ಖಾನೆಗಳಿಗೆ ಅನುಮತಿ
* ಗೂಡ್ಸ್ ವಾಹನಗಳ ಸರಕು ಸಾಗಾಟಕ್ಕೆ ಮಾತ್ರ ಅವಕಾಶ
* ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ
* ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಗೆ ಅವಕಾಶ
* ಇ-ಕಾಮರ್ಸ್ ಮೂಲಕ ವಸ್ತುಗಳ ಡಿಲೆವರಿಗೆ ಅವಕಾಶ
* ಬ್ಯಾಂಕಿಂಗ್ ಕ್ಷೇತ್ರಕ್ಕೆ ಅವಕಾಶ
* ಕಂಪನಿ, ಸಂಸ್ಥೆಗಳ ಸಾಧ್ಯವಾದಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಗೆ ಸೂಚನೆ.
* ಕೃಷಿ ಚಟುವಟಿಕೆ, ಕಟ್ಟಡ ಕಾಮಗಾರಿಗಳಿಗೆ ಅನುಮತಿ