
ವಿಶ್ವದ ಅತೀ ಎತ್ತರದ ಕಟ್ಟಡದಲ್ಲಿ ತ್ರಿವರ್ಣ ಧ್ವಜದ ಬೆಳಕು ರಾರಾಜಿಸಿದ್ದು ಮಾತ್ರವಲ್ಲದೇ ʼಸದೃಢವಾಗಿರು ಭಾರತʼ ಎಂಬ ಸಂದೇಶವನ್ನ ಭಾನುವಾರ ರಾತ್ರಿ ನೀಡಲಾಗಿದೆ.
ಭಾರತವು ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ, ಯುಎಇ ಭಾರತಕ್ಕೆ ಶುಭಾಶಯಗಳನ್ನ ತಿಳಿಸುತ್ತಿದೆ, ದುಬೈನ ಬುರ್ಜ್ ಖಲೀಫಾ ಪ್ರಮುಖ ಕಟ್ಟಡದಲ್ಲಿ ತ್ರಿವರ್ಣ ಧ್ವಜವನ್ನ ಹಾರಿಸುವ ಮೂಲಕ ನಮ್ಮ ಈ ಹೋರಾಟಕ್ಕೆ ನಮ್ಮ ಬೆಂಬಲವನ್ನ ನೀಡುತ್ತಿದ್ದೇವೆ ಎಂದು ಭಾರತದ ರಾಯಭಾರಿ ಕಚೇರಿ ಯುಎಇ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ.
ಯುಎಇ ಭಾರತದ ರಾಯಭಾರಿ ಪವನ್ ಕಪೂರ್, ಈ ಕಷ್ಟದ ಸಂದರ್ಭದಲ್ಲಿ ಭಾರತದ ಪರವಾಗಿ ಯುಎಇ ನೀಡಿದ ಬೆಂಬಲವನ್ನ ನಾವು ಪ್ರಶಂಸಿಸುತ್ತಿದ್ದೇವೆ ಎಂದು ಟ್ವಿಟರ್ನಲ್ಲಿ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆ ಕಳೆದ 10 ದಿನಗಳಿಂದ ಯುಎಇ ಭಾರತೀಯರ ಯುಎಇ ಪ್ರವಾಸಕ್ಕೆ ನಿರ್ಬಂಧ ಹೇರಿದೆ. ಆದರೆ ದುಬೈನಿಂದ ಎಂದಿನಂತೆ ವಿಮಾನಗಳು ಸಂಚರಿಸಲಿವೆ. ಯುಎಇ ಮಾತ್ರವಲ್ಲದೇ ಬ್ರಿಟನ್, ಫ್ರಾನ್ಸ್, ಜರ್ಮನಿ, ನ್ಯೂಜಿಲೆಂಡ್, ಹಾಂಕಾಂಗ್ ಹಾಗೂ ಪಾಕಿಸ್ತಾನ, ಭಾರತ ಪ್ರವಾಸಕ್ಕೆ ನಿರ್ಬಂಧ ಹೇರಿವೆ.