alex Certify ‌ʼಕೊರೊನಾʼ ಸೋಂಕಿತರು ಏನು ಮಾಡಬೇಕು…? ಏನು ಮಾಡಬಾರದು…? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕೊರೊನಾʼ ಸೋಂಕಿತರು ಏನು ಮಾಡಬೇಕು…? ಏನು ಮಾಡಬಾರದು…? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿದ್ದು ಸೋಂಕಿನ ವಿರುದ್ಧ ಸಂಪೂರ್ಣ ವೈದ್ಯಕೀಯ ಲೋಕ ಹಗಲಿರುಳು ಶ್ರಮಿಸುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ ಉಂಟಾಗಿರೋದ್ರಿಂದ ರೋಗಿಗಳು ಪಡಬಾರದ ಕಷ್ಟ ಪಡ್ತಿದ್ದಾರೆ.

ನಿಮಗೂ ಕೂಡ ಕೊರೊನಾ ಲಕ್ಷಣಗಳು ಕಾಣಲಾರಂಭಿಸಿದ್ರೆ ಈ ಕೆಳಗಿನ ಮಾರ್ಗಗಳನ್ನ ಅನುಸರಿಸಿ :

ಪ್ರತ್ಯೇಕ ವಾಶ್​ರೂಮ್​ ಹೊಂದಿರುವ ಕೊಠಡಿಯಲ್ಲಿ ಐಸೋಲೇಟ್​ ಆಗಿ. ಆದಷ್ಟು ಬೇಗ ಆರ್​ಟಿ – ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಿ.

ಮನೆಯಲ್ಲೇ ಇರಿ. ಸೌಮ್ಯ ಲಕ್ಷಣ ಹೊಂದಿರುವ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳಬಹುದು. ವೈದ್ಯರ ಜೊತೆ ನಿಕಟ ಸಂಪರ್ಕದಲ್ಲಿರಿ.

ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಗಮನವಿರಲಿ. ಉಸಿರಾಟದ ಸಮಸ್ಯೆ ಉಲ್ಬಣವಾಗ್ತಾ ಇರೋದು ಗಮನಕ್ಕೆ ಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ.

ಉತ್ತಮ ಗುಣಮಟ್ಟದ ಮಾಸ್ಕ್​ಗಳನ್ನ ಧರಿಸಿ. ಸರ್ಜಿಕಲ್​ ಇಲ್ಲವೇ ಎನ್​ 95 ಮಾಸ್ಕ್​ಗಳಲ್ಲಿ ನಿಮ್ಮ ಮೂಗು, ಬಾಯಿ ಸಂಪೂರ್ಣ ಮುಚ್ಚುವಂತಿರಲಿ.

ಪದೇ ಪದೇ ಕೈಗಳನ್ನ ತೊಳೆಯುತ್ತಲೇ ಇರಿ.

ಆದಷ್ಟು ಸಮಯ ನೀರು ಕುಡಿಯುತ್ತಲೇ ಇರಿ. ತೀರಾ ಮಸಾಲೆಯಲ್ಲದ, ಎಣ್ಣೆಯಲ್ಲಿ ಕರಿಯದ ಆಹಾರಗಳನ್ನ ಸೇವಿಸಿ.

ಈ ಕೆಲಸಗಳನ್ನ ಮಾಡಲೇಬೇಡಿ :

ನೀವು ಬಳಸುವ ಶೌಚಾಲಯ, ಆಹಾರಗಳನ್ನ ಇತರರೊಂದಿಗೆ ಹಂಚಿಕೊಳ್ಳಬೇಡಿ.

ಸಾರ್ವಜನಿಕ ಸಾರಿಗೆ ಬಳಕೆ ಮಾಡಬೇಡಿ.

ಮನೆ ಬಿಟ್ಟು ಎಲ್ಲಿಗೂ ಹೋಗಬೇಡಿ. ವೈದ್ಯಕೀಯ ಕಾರ್ಯಕ್ಕಾಗಿ ಮಾತ್ರ ಹೊರ ಹೋಗಿ.

ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲೇಬೇಡಿ.

ಮನೆಯಲ್ಲೇ ಇರುವಾಗ ರೆಮಿಡಿಸಿವರ್​, ಸ್ಟೆರಾಯ್ಡ್ಸ್​ ತೆಗೆದುಕೊಳ್ಳಲೇಬೇಡಿ.

ಕೊರೊನಾ ಪಾಸಿಟಿವ್​ ವರದಿ ಬಳಿಕ ಈ ಕೆಲಸ ಮಾಡಿ :

ಆರ್​ಟಿ – ಪಿಸಿಆರ್​ ವರದಿ ಬಂದ ಬಳಿಕ ಆದಷ್ಟು ಬೇಗ ವೈದ್ಯರ ಅಪಾಯಿಂಟ್​ಮೆಂಟ್​ ಪಡೆಯಿರಿ. ಅಲ್ಲಿಯವರೆಗೂ ಮನೆಯಲ್ಲೇ ಇರಿ.

ನಿಮ್ಮ ಲಕ್ಷಣಗಳ ಮೇಲೆ ಗಮನವಿರಲಿ. ರೋಗದ ಲಕ್ಷಣಗಳು ಹೆಚ್ಚಾಗುತ್ತಿರೋದು ಗಮನಕ್ಕೆ ಬಂದಲ್ಲಿ ವೈದ್ಯರನ್ನ ಸಂಪರ್ಕಿಸಿ.

ನಿಮ್ಮ ಪ್ರಾಥಮಿಕ ಸಂಪರ್ಕಿತರಿಗೆ ನಿಮ್ಮ ಪಾಸಿಟಿವ್​ ವರದಿ ಬಗ್ಗೆ ಮಾಹಿತಿ ನೀಡಿ.

ಪ್ರತ್ಯೇಕ ಶೌಚಾಲಯವಿರುವ ಪ್ರತ್ಯೇಕ ಕೋಣೆಯಲ್ಲಿ ಐಸೋಲೇಟ್​ ಆಗಿರಿ.

ಆದಷ್ಟು ವಿಶ್ರಾಂತಿ ಪಡೆಯಿರಿ, ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಿ, ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.

ಆಕ್ಸಿಮೀಟರ್​ನಲ್ಲಿ ಪದೇ ಪದೇ ಆಮ್ಲಜನಕ ಪ್ರಮಾಣವನ್ನ ಪರೀಕ್ಷೆ ಮಾಡಿಕೊಳ್ಳುತ್ತಲೇ ಇರಿ. ಆಮ್ಲಜನಕ ಮಟ್ಟ ಕ್ಷೀಣಿಸುತ್ತಿರೋದು ಗಮನಕ್ಕೆ ಬಂದಲ್ಲಿ ವೈದ್ಯರನ್ನ ಭೇಟಿಯಾಗಿ.

ಪ್ರೋನಿಂಗ್​ ಮಾದರಿಯಲ್ಲಿ ಮಲಗಿಕೊಳ್ಳಿ. ಈ ರೀತಿ ಮಾಡೋದ್ರಿಂದ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟ ಸುಧಾರಿಸಲಿದೆ.

ಕೆಮ್ಮುವಾಗ ಹಾಗೂ ಸೀನುವಾಗ ಮುಖಕ್ಕೆ ಕರವಸ್ತ್ರ ಹಾಗೂ ಟಿಶ್ಯೂ ಪೇಪರ್​ ಹಿಡಿಯಿರಿ.

ಬಳಸಿದ ಟಿಶ್ಯೂ ಪೇಪರ್​ಗಳನ್ನ ಸರಿಯಾಗಿ ಡಂಪ್​ ಮಾಡಿ.

20 ಸೆಕೆಂಡ್​ಗಳ ಕಾಲ ನಿಮ್ಮ ಕೈಯನ್ನ ಸೋಪು ಹಾಗೂ ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

ಸೋಂಕಿಗೆ ಒಳಗಾದ ಮೇಲೆ ಈ ಕಾರ್ಯ ಮಾಡಲೇಬೇಡಿ :

ನೀವು ಬಳಸಿದ ಪಾತ್ರೆಗಳನ್ನ, ಟವೆಲ್​, ಹಾಸಿಗೆ, ಆಹಾರ , ಶೌಚಾಲಯಗಳನ್ನ ಇತರರೊಂದಿಗೆ ಹಂಚಿಕೊಳ್ಳಬೇಡಿ.

ನೀವಾಗಿಯೇ ಸ್ಟೆರಾಯ್ಡ್ಸ್ ಹಾಗೂ ರೆಮಿಡಿಸಿವರ್ ಪಡೆಯುವ ಸಾಹಸ ಬೇಡ.

ಸಾರ್ವಜನಿಕ ಸ್ಥಳಗಳಾದ ಕಚೇರಿ, ಸಿನಿಮಾ ಮಂದಿರ, ಹೋಟೆಲ್​ ಸೇರಿದಂತೆ ಜನನಿಬಿಡ ಸ್ಥಳಕ್ಕೆ ಭೇಟಿ ನೀಡುವುದನ್ನ ನಿಲ್ಲಿಸಿ.

ವೈದ್ಯಕೀಯ ಕಾರ್ಯಕ್ಕೆ ಹೊರತುಪಡಿಸಿ ಇನ್ಯಾವ ಕಾರ್ಯಕ್ಕೂ ಮನೆಬಿಟ್ಟು ಹೊರಬರಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...