ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದಂತೆಯೇ ಹ್ಯಾಂಡ್ ಸ್ಯಾನಿಟೈಸರ್ಗಳಿಗೂ ಮತ್ತೆ ಬೇಡಿಕೆ ಹೆಚ್ಚಾಗಿದೆ. ಇದೇ ಪರಿಸ್ಥಿತಿಯ ಲಾಭ ಪಡೆದ ಅನೇಕರು ನಕಲಿ ಸ್ಯಾನಿಟೈಸರ್ಗಳನ್ನ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ.
ಇಂತಹದ್ದೇ ಒಂದು ಪ್ರಕರಣದಲ್ಲಿ ಪಿಸಿಬಿ ಅಧಿಕಾರಿಗಳು ವಡೋದರಾದಲ್ಲಿ 2 ಅಂಗಡಿಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ನಕಲಿ ಸ್ಯಾನಿಟೈಸರ್ಗಳನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
10 ಲಕ್ಷ ರೂಪಾಯಿ ಮೌಲ್ಯದ ನಕಲಿ ಸ್ಯಾನಿಟೈಸರ್ಗಳನ್ನ ವಸ್ನಾ ರಸ್ತೆ ಹಾಗೂ ರಾವೋಪುರ ನಗರದ ಎರಡು ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಈ ಅಂಗಡಿಗಳಿಗೆ ನಕಲಿ ಸ್ಯಾನಿಟೈಸರ್ಗಳನ್ನ ಪೂರೈಸಿದ ಆರೋಪಿ ನಿತಿನ್ ಕೊಟ್ವಾನಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಮೋಸದ ಉದ್ಯಮದಿಂದ ನಿತಿನ್ ಕೇವಲ 10 ತಿಂಗಳಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಯನ್ನ ಸಂಪಾದಿಸಿದ್ದನಂತೆ..! ಇನ್ನು ಈ ವಿಚಾರವಾಗಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶಮ್ಶೇರ್ ಸಿಂಗ್, ಕೋಟ್ವಾನಿಯಿಂದ ನಕಲಿ ಸ್ಯಾನಿಟೈಸರ್ ಪಡೆದ ಇನ್ನೂ ಹಲವರನ್ನ ಪತ್ತೆ ಮಾಡುತ್ತಿದ್ದೇವೆ ಎಂದು ಹೇಳಿದ್ರು. ಈ ಸ್ಯಾನಿಟೈಸರ್ಗಳಲ್ಲಿ ಅಪಾಯಕಾರಿ ರಾಸಾಯನಿಕವಾದ ಮಿಥನಾಲ್ ಇದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.