alex Certify ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಸಂದರ್ಭದಲ್ಲಿ ಬೆಳಕಿಗೆ ಬಂದಿರುವ ಈ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಸಂದರ್ಭದಲ್ಲಿ ಬೆಳಕಿಗೆ ಬಂದಿರುವ ಈ ಘಟನೆ

ಕೊರೊನಾ ವೈರಸ್​ ಸೋಂಕು ಹೆಚ್ಚಾಗುತ್ತಿದ್ದಂತೆಯೇ ಹ್ಯಾಂಡ್​ ಸ್ಯಾನಿಟೈಸರ್​ಗಳಿಗೂ ಮತ್ತೆ ಬೇಡಿಕೆ ಹೆಚ್ಚಾಗಿದೆ. ಇದೇ ಪರಿಸ್ಥಿತಿಯ ಲಾಭ ಪಡೆದ ಅನೇಕರು ನಕಲಿ ಸ್ಯಾನಿಟೈಸರ್​ಗಳನ್ನ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ.

ಇಂತಹದ್ದೇ ಒಂದು ಪ್ರಕರಣದಲ್ಲಿ ಪಿಸಿಬಿ ಅಧಿಕಾರಿಗಳು ವಡೋದರಾದಲ್ಲಿ 2 ಅಂಗಡಿಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ನಕಲಿ ಸ್ಯಾನಿಟೈಸರ್​ಗಳನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

10 ಲಕ್ಷ ರೂಪಾಯಿ ಮೌಲ್ಯದ ನಕಲಿ ಸ್ಯಾನಿಟೈಸರ್​ಗಳನ್ನ ವಸ್ನಾ ರಸ್ತೆ ಹಾಗೂ ರಾವೋಪುರ ನಗರದ ಎರಡು ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಈ ಅಂಗಡಿಗಳಿಗೆ ನಕಲಿ ಸ್ಯಾನಿಟೈಸರ್​ಗಳನ್ನ ಪೂರೈಸಿದ ಆರೋಪಿ ನಿತಿನ್​ ಕೊಟ್ವಾನಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಮೋಸದ ಉದ್ಯಮದಿಂದ ನಿತಿನ್​ ಕೇವಲ 10 ತಿಂಗಳಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಯನ್ನ ಸಂಪಾದಿಸಿದ್ದನಂತೆ..! ಇನ್ನು ಈ ವಿಚಾರವಾಗಿ ಮಾತನಾಡಿದ ನಗರ ಪೊಲೀಸ್​ ಕಮಿಷನರ್​​ ಶಮ್​ಶೇರ್​ ಸಿಂಗ್, ಕೋಟ್ವಾನಿಯಿಂದ ನಕಲಿ ಸ್ಯಾನಿಟೈಸರ್​ ಪಡೆದ ಇನ್ನೂ ಹಲವರನ್ನ ಪತ್ತೆ ಮಾಡುತ್ತಿದ್ದೇವೆ ಎಂದು ಹೇಳಿದ್ರು. ಈ ಸ್ಯಾನಿಟೈಸರ್​ಗಳಲ್ಲಿ ಅಪಾಯಕಾರಿ ರಾಸಾಯನಿಕವಾದ ಮಿಥನಾಲ್​ ಇದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...