ದೇಶದಲ್ಲಿ ಕೊರೊನಾ ವೈರಸ್ನಿಂದ ಕಂಗೆಟ್ಟ ರಾಜ್ಯಗಳ ಸಾಲಿನಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಡೆಡ್ಲಿ ವೈರಸ್ ಹಾವಳಿ ತಪ್ಪಿಸೋಕೆ ಮಹಾರಾಷ್ಟ್ರ ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಳ್ತಿದೆ.
ಈ ನಡುವೆ ಮುಂಬೈ ಪೊಲೀಸರು ಕೂಡ ಜನರ ಸುರಕ್ಷತೆ ಕಡೆ ಗಮನ ಹರಿಸೋದ್ರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಜಾಗೃತಿ ಮೂಡಿಸುವ ಕಾರ್ಯ ಮಾಡ್ತಿದ್ದಾರೆ.
ರಸ್ತೆಗಳಲ್ಲಿ ತುರ್ತು ಸೇವಾ ವಾಹನಗಳು ಮಾತ್ರ ಸಂಚರಿಸುತ್ತಿವೆ ಎಂಬುದನ್ನ ದೃಢೀಕರಿಸುವ ಸಲುವಾಗಿ ಮುಂಬೈ ಪೊಲೀಸ್ ಇಲಾಖೆ ಕಲರ್ ಕೋಡೆಡ್ ಸ್ಟಿಕರ್ಗಳನ್ನ ಜಾರಿಗೆ ತಂದಿದೆ. ಜನರಿಗೆ ಇಂತಹ ಕಠಿಣ ಸಂದರ್ಭದಲ್ಲಿಯೂ ತುರ್ತು ಸೇವೆಗಳು ತಲುಪುವಂತೆ ಮಾಡಲು ಮುಂಬೈ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸೇವೆ ಎಷ್ಟರ ಮಟ್ಟಿಗೆ ಅಂದರೆ ಮುಂಬೈ ಪೊಲೀಸರು ಜನ ಸಾಮಾನ್ಯರ ಬರ್ತಡೇ ಕೇಕ್ಗಳನ್ನೂ ತಲುಪಿಸಿದ್ದಾರೆ..!
ಗುರುವಾರ ಟ್ವಿಟರ್ ಪೋಸ್ಟ್ನಲ್ಲಿ ಮುಂಬೈ ಪೊಲೀಸರನ್ನ ಟ್ಯಾಗ್ ಮಾಡಿದ ಬಳಕೆದಾರರೊಬ್ಬರು ಸ್ನೇಹಿತರನ್ನ ಭೇಟಿಯಾಗಲು ಯಾವ ಕಲರ್ ಸ್ಟಿಕರ್ನ್ನು ವಾಹನಕ್ಕೆ ಅಳವಡಿಸಬೇಕು..? ಎಂದು ಪ್ರಶ್ನೆ ಮಾಡಿದ್ದರು.
@samsays ಎಂಬ ಟ್ವೀಟರ್ ಬಳಕೆದಾರರು ತಾವು ಲಾಕ್ಡೌನ್ ನಿಯಮದಂತೆಯೇ ಗೆಳೆಯರಿಗೆ ಬರ್ತಡೇ ಪಾರ್ಟಿಗೆ ನಿರಾಕರಿಸಿರುವ ಬಗ್ಗೆ ಸ್ಕ್ರೀನ್ ಶಾಟ್ ಒಂದನ್ನ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಶೇರ್ ಮಾಡಿದ್ದಾರೆ.
ಮುಂಬೈ ಪೊಲೀಸರು @samsays ಜನ್ಮ ದಿನಕ್ಕೆ ಕೇಕ್ ಕಳುಹಿಸಿಕೊಟ್ಟಿದ್ದು ಪ್ರಜ್ಞಾವಂತ ನಾಗರೀಕ ಎಂದು ಕೇಕ್ ಮೇಲೆ ಬರೆಯಲಾಗಿದೆ. ಈ ಕೇಕ್ನ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ @samsays ಮುಂಬೈ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.