ಅನೇಕರಿಗೆ ಲಸಿಕೆ ಪಡೆದ ನಂತರವೂ ಕೊರೊನಾ ಸೋಂಕು ತಗುಲಿದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ಅವರು ಬಹುಮುಖ್ಯವಾದ ಹೇಳಿಕೆ ನೀಡಿದ್ದಾರೆ.
ಲಸಿಕೆ ಶ್ವಾಸಕೋಶದ ಕೆಳಭಾಗಕ್ಕೆ ರಕ್ಷಣೆ ನೀಡುತ್ತದೆ. ಶ್ವಾಸಕೋಶದ ಮೇಲ್ಭಾಗಕ್ಕೆ ಸೋಂಕಿನಿಂದ ರಕ್ಷಣೆ ನೀಡಿರುವುದಿಲ್ಲ. ಹೀಗಾಗಿ ಲಸಿಕೆ ಪಡೆದ ನಂತರವೂ ಕೆಲವರಿಗೆ ಸೋಂಕು ಹರಡುತ್ತಿದೆ ಎಂದು ಕೃಷ್ಣ ಎಲಾ ತಿಳಿಸಿದ್ದಾರೆ.
ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಬೇಕು. ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸುವ ಭಾರತ್ ಬಯೋಟೆಕ್ ಎಂಡಿ ಕೃಷ್ಣ ಎಲಾ ತಿಳಿಸಿದ್ದು, ಲಸಿಕೆ ಪಡೆದ ನಂತರವೂ ಸೋಂಕು ತಗುಲಿದರೆ ಅದು ಮಾರಕವಾಗುವುದಿಲ್ಲ ಎಂದು ಹೇಳಿದ್ದಾರೆ.