ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಆದ ಬದಲಾವಣೆಯಿಂದ ಚಿನ್ನದ ದರ ಹೆಚ್ಚಳವಾಗಿದೆ. ಷೇರು ಸೂಚ್ಯಂಕ ಕುಸಿತವಾಗುತ್ತಿದ್ದಂತೆ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ.
ಚಿನ್ನದ ದರ 10 ಗ್ರಾಂಗೆ 770 ರೂಪಾಯಿ ಹೆಚ್ಚಳವಾಗಿದೆ. 24 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 48,160 ರೂಪಾಯಿಗೆ ತಲುಪಿದೆ. ಅದೇ ರೀತಿ 22 ಕ್ಯಾರೆಟ್ ಚಿನ್ನದ ದರ 44,850 ರೂಪಾಯಿಗೆ ಹೆಚ್ಚಳವಾಗಿದೆ.
ಬೆಳ್ಳಿ ದರ ಕೆಜಿಗೆ 200 ಹೆಚ್ಚಳವಾಗಿದ್ದು, 68,800 ರೂ. ತಲುಪಿದೆ. ಷೇರು ಸೂಚ್ಯಂಕ ಕುಸಿತವಾಗುತ್ತಿರುವುದರಿಂದ ಹೂಡಿಕೆದಾರರು ಸುರಕ್ಷಿತವಾಗಿರುವ ಬಂಗಾರದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವ ಕಾರಣ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ.