ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ತನ್ನ ರಣಕೇಕೆ ಮುಂದುವರಿಸಿದೆ. ಈ ನಡುವೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ, ತನ್ನ ಭಾರತೀಯ ಭಕ್ತರ ಕೈಲಾಸ ಪ್ರವಾಸಕ್ಕೆ ನಿರ್ಬಂಧ ಹೇರಿದ್ದಾನೆ.
ಭಾರತದ ಜೊತೆಯಲ್ಲಿ ಬ್ರೆಜಿಲ್, ಯುರೋಪ್ ರಾಷ್ಟ್ರಗಳ ಒಕ್ಕೂಟ ಹಾಗೂ ಮಲೇಷಿಯಾ ಭಕ್ತರಿಗೆ ಕೈಲಾಸ ಪ್ರವಾಸಕ್ಕೆ ನಿರ್ಬಂಧ ಹೇರಲಾಗಿದೆ. ಭಕ್ತರಿಗೆ ನಿತ್ಯಾನಂದ ಸ್ವಾಮಿ ನೀಡಿರುವ ವಿಡಿಯೋ ಸಂದೇಶ ಟ್ವಿಟರ್ನಲ್ಲಿ ಸಾಕಷ್ಟು ಟ್ರೋಲ್ಗೆ ಗುರಿಯಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ 2019ರಲ್ಲಿ ಭಾರತದಿಂದ ಪಲಾಯನ ಮಾಡಿದ್ದಾನೆ. ಹಾಗೂ ಈಕ್ವೆಡಾರ್ನ ದ್ವೀಪವೊಂದಕ್ಕೆ ಕೈಲಾಸ ಎಂದು ಹೆಸರಿಟ್ಟು ಅಲ್ಲಿ ತಲೆಮರೆಸಿಕೊಂಡಿದ್ದಾನೆ.
ನಿತ್ಯಾನಂದ ಸ್ವಾಮಿಯ ಪ್ರವಚನದ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಟ್ರೋಲ್ ಆಗಿದೆ. ಈತ ಈಗಾಗಲೇ ಕೈಲಾಸವನ್ನ ಪ್ರತ್ಯೇಕ ದೇಶವೆಂದು ಗುರುತಿಸಿ ಎಂದು ಮನವಿ ಮಾಡಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾನೆ.
ಕೈಲಾಸಕ್ಕೆ ಪ್ರತ್ಯೇಕ ವೆಬ್ಸೈಟ್ ತೆರೆಯೋದ್ರ ಜೊತೆಗೆ ಆತ ಅಲ್ಲಿ ಪ್ರತ್ಯೇಕ ಬ್ಯಾಂಕ್ನ್ನೂ ತೆರೆದಿರೋದಾಗಿ ಹೇಳಿದ್ದಾನೆ.