ನಟಿ ಹಾಗೂ ಮಾಡೆಲ್ ಆರ್ಶಿ ಖಾನ್ ವಿವಾದಿತ ಬಿಗ್ಬಾಸ್ ಶೋನಲ್ಲಿ ಕಾಣಿಸಿಕೊಂಡ ಬಳಿಕ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾದಂತವರು. ಆರ್ಶಿ ಖಾನ್ ಮುಂಬೈನ ವಿವಿಧೆಡೆ ಆಗಾಗ ಕಾಣಿಸಿಕೊಳ್ತಾನೇ ಇರ್ತಾರೆ.
ಸಾಮಾನ್ಯವಾಗಿ ಪತ್ರಕರ್ತರ ಎದುರು ಕಾಣಿಸಿಕೊಳ್ಳುವ ಈ ನಟಿ ಒಂದಿಲ್ಲೊಂದು ಯಡವಟ್ಟಿಗೆ ಸಾಕ್ಷಿಯಾಗುತ್ತಲೇ ಇರ್ತಾರೆ. ಈ ಬಾರಿ ಕೂಡ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿ ಆರ್ಶಿ ಖಾನ್ ಕೈಗೆ ಮುತ್ತನ್ನಿಕ್ಕಿದ್ದು ಆರ್ಶಿ ಒಮ್ಮೆಲೆ ಶಾಕ್ ಆಗಿದ್ದಾರೆ.
ಸೋಮವಾರ ಆರ್ಶಿ ಖಾನ್ ಮುಂಬೈನ ಏರ್ಪೋರ್ಟ್ನ ಲ್ಲಿ ಅಭಿಮಾನಿಗಳ ಜೊತೆ ಕಾಣಿಸಿಕೊಂಡಿದ್ದರು. ಆರ್ಶಿ ಖಾನ್ರನ್ನ ನೋಡಲು ಬಂದ ಅಭಿಮಾನಿಯನ್ನ ನಗುಮುಖದಿಂದಲೇ ಸ್ವಾಗತಿಸಿದ ಆರ್ಶಿ ಸೆಲ್ಫಿಗೆ ಅನುಮತಿ ನೀಡಿದ್ರು. ಆದರೆ ಆತ ತಕ್ಷಣವೇ ಆಕೆಯ ಕೈಗೆ ಕಿಸ್ ಮಾಡಿದ್ದಾನೆ. ಆರ್ಶಿ ಖಾನ್ ಪತ್ರಕರ್ತರನ್ನ ನೋಡುತ್ತಿದ್ದ ವೇಳೆಯಲ್ಲಿ ಅಭಿಮಾನಿ ಈ ರೀತಿ ಮಾಡಿದ್ದಾನೆ.
ಈ ಘಟನೆಯಿಂದ ಆರ್ಶಿ ಖಾನ್ ಕೆಲಕಾಲ ಶಾಕ್ಗೆ ಒಳಗಾದ್ರು. ಕೂಡಲೇ ಅಲ್ಲಿಂದ ದೂರ ಸರಿದ ಆರ್ಶಿ ಬಳಿಕ ತಮ್ಮ ಸ್ಥಳಕ್ಕೆ ವಾಪಾಸ್ ಬಂದ್ರು. ಈ ವೇಳೆ ಏನಾಯ್ತು ಮೇಡಂ ಎಂದು ಕೇಳಿದ ಪ್ರಶ್ನೆಗೆ ಆರ್ಶಿ ಹೊರಡಿ, ಹೊರಡಿ, ಬೇಗ ಹೊರಡಿ ಎಂದಷ್ಟೇ ಹೇಳಿದ್ರು.
ಸಂದರ್ಶನವೊಂದರಲ್ಲಿ ಮಾತನಾಡಿರುವ ಆರ್ಶಿ ಖಾನ್ ತಾನು ವಿವಾದಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದೇ ಇಲ್ಲ ಎಂದು ಹೇಳಿದ್ದಾರೆ. ನನ್ನ ಜೀವನ ವಿವಾದಾತ್ಮಕ ಎನ್ನೋದು ನನಗೂ ತಿಳಿದಿದೆ. ಆದರೆ ನಾನು ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದೇ ಇಲ್ಲ ಎಂದು ಹೇಳಿದ್ದಾರೆ.
ವೃತ್ತಿ ಜೀವನದ ಪ್ರಕಾರ ಆರ್ಶಿ ಖಾನ್ ಕೊನೆಯ ಬಾರಿಗೆ ಬಿಗ್ ಬಾಸ್ ಸೀಸನ್ 14 ಮೂಲಕ ತೆರೆ ಮುಂದೆ ಬಂದಿದ್ದಾರೆ. ಅಲ್ಲದೇ ತೀರಾ ಇತ್ತೀಚಿಗೆ ಅವರು ನಟಿಸಿದ ಸೀರಿಸ್ನಲ್ಲಿ ಪಂಜಾಬಿ ಮ್ಯೂಸಿಕ್ ವಿಡಿಯೋಗಾಗಿ ಕೆಲಸ ಮಾಡಿದ್ದಾರೆ.
https://www.instagram.com/p/CN2Wy2XnA8g/?utm_source=ig_web_copy_link