alex Certify ಇಹಲೋಕ ತ್ಯಜಿಸಿದ ಅಮೆರಿಕಾದ ಅತಿ ʼಹಿರಿಯʼ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಹಲೋಕ ತ್ಯಜಿಸಿದ ಅಮೆರಿಕಾದ ಅತಿ ʼಹಿರಿಯʼ ಮಹಿಳೆ

ಮನುಷ್ಯನ ಸದ್ಯದ ಸರಾಸರಿ ಜೀವಿತಾವಧಿ ವಯಸ್ಸು 65 – 70 ಇರಬಹುದು, ಹೆಚ್ಚೆಂದರೆ ನಮ್ಮ‌ ಕಣ್ಣಮುಂದೆ ಬೆರಳೆಣಿಕೆಯಷ್ಟು ಶತಾಯುಷಿಗಳು ಇರಬಹುದೇನೋ.

ಇಲ್ಲೊಬ್ಬಾಕೆ 115 ವರ್ಷ ಬದುಕಿ‌ ದಾಖಲೆ ಸ್ಥಾಪಿಸಿದ್ದರು, ಆಕೆಯ ಕಣ್ಣ ಮುಂದೆಯೇ ಮೊಮ್ಮಕ್ಕಳೂ ಸಹ ಜೀವನ‌ ಮುಗಿಸಿ ಕಣ್ಮುಚ್ಚಿದರೂ ಈಕೆ ಮಾತ್ರ ಗಟ್ಟಿಮುಟ್ಟಾಗಿ ಬಾಳಿ ಬದುಕಿದ್ದರು. ಇದೀಗ ಅವರು ಶನಿವಾರದಂದು ವಿಧಿವಶರಾಗಿದ್ದಾರೆ.

ಉತ್ತರ ಕೆರೊಲಿನಾದ ಹೆಸ್ಟರ್ ಫೋರ್ಡ್ ಎಂಬಾಕೆ ಅತ್ಯಂತ ದೀರ್ಘಾವಧಿಯ ಬದುಕಿದ ಅಮೆರಿಕನ್ ವ್ಯಕ್ತಿ ಎಂದು ಗುರುತಿಸಲ್ಪಟ್ಟಿದ್ದರು.

ಮತ್ತೊಂದು ಪೈಶಾಚಿಕ ಕೃತ್ಯ: ಸಾಮೂಹಿಕ ಅತ್ಯಾಚಾರವೆಸಗಿ ಮಹಿಳೆ ಹತ್ಯೆ –ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

ಯುಎಸ್ ಸೆನ್ಸಸ್ ಬ್ಯೂರೋ ದಾಖಲೆಗಳ ಪ್ರಕಾರ ಫೋರ್ಡ್ 1905 ಅಥವಾ 1904ರಲ್ಲಿ ಜನಿಸಿದರು. ಆದರೆ ಹುಟ್ಟಿದ ವರ್ಷದ ಗೊಂದಲವು ಅವಳನ್ನು ದೇಶದ ಅತ್ಯಂತ ಹಿರಿಯ ವ್ಯಕ್ತಿಯಾಗುವುದನ್ನು ಗುರುತಿಸಲು ಅಡ್ಡಿ ಇಲ್ಲ ಎಂದು ಜೆರೊಂಟಾಲಜಿ ರಿಸರ್ಚ್ ಗ್ರೂಪ್ ಹೇಳಿದೆ. ಆದರೆ ಆಕೆಯ ವಯಸ್ಸು ವಿವಾದದ ವಿಷಯವಾಗಿ ಉಳಿದಿದೆ.

ಆಕೆ ನಮ್ಮ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದಳು ಮತ್ತು ನಮಗೆಲ್ಲರಿಗೂ ಪ್ರೀತಿ, ಪ್ರೋತ್ಸಾಹ ಮತ್ತು ತಿಳುವಳಿಕೆ ನೀಡಿದ್ದಳು ಎಂದು ಮೊಮ್ಮಗಳು ತನೀಶಾ ಪ್ಯಾಟರ್ಸನ್-ಪೊವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫೋರ್ಡ್‌ಗೆ 14 ವರ್ಷದವಳಿದ್ದಾಗ ಜಾನ್ ಎಂಬುವರ ಜತೆ ವಿವಾಹವಾಗಿತ್ತಂತೆ. ಆಕೆಗೆ ಹದಿನಾಲ್ಕು ಮಕ್ಕಳು, 68 ಮೊಮ್ಮಕ್ಕಳು, 125 ಮರಿ‌ಮೊಮ್ಮಕ್ಕಳು, 120 ಗಿರಿ ಮೊಮ್ಮಕ್ಕಳಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...