ಬೆಂಗಳೂರು: ಕನ್ನಡ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನರಾಗಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ತಡರಾತ್ರಿ 1.30 ರ ವೇಳೆಗೆ ಜಿ. ವೆಂಕಟಸುಬ್ಬಯ್ಯ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅವರು ವಿಧಿವಶರಾಗಿದ್ದಾರೆ.
1913 ಆಗಸ್ಟ್ 13 ರಂದು ಜನಿಸಿದ ಅವರು ಭಾಷಾ ತಜ್ಞ, ಸಂಶೋಧ,ಕ ಬರಹಗಾರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ನಿಘಂಟು ಶಾಸ್ತ್ರ ಪರಿಚಯ ಅವರ ಶ್ರೇಷ್ಠ ಗ್ರಂಥವಾಗಿದೆ. ಇಗೋ ಕನ್ನಡದ ಮೂಲಕ ಇ – ನಿಘಂಟು ಸೃಷ್ಟಿಸಿದ್ದರು. ಜೀವಿ ಎಂದೇ ಸಾಹಿತ್ಯವಲಯದಲ್ಲಿ ಖ್ಯಾತರಾಗಿದ್ದ ಅವರು ಪಂಪ ಪ್ರಶಸ್ತಿ, ಕನ್ನಡ ಸಾಹಿತ್ಯ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ, ಪದ್ಮಶ್ರೀ, ಭಾಷಾ ಸಮ್ಮಾನ್ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.