ಆಸ್ಟ್ರೇಲಿಯಾದ ಹಡಗಿನಲ್ಲಿ ನೃತ್ಯ ತಂಡವೊಂದರ ಸೊಂಟ ಬಳುಕಿಸಿದ ನೃತ್ಯ ಪ್ರದರ್ಶನ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೇ ಹುಟ್ಟುಹಾಕಿದೆ.
ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ಹೊಸ ಹಡಗಿನ ಕಾರ್ಯಾರಂಭ ಕಾರ್ಯಕ್ರಮದಲ್ಲಿ 101 ಡಾಲ್ ಸ್ಕ್ವಾಡ್ರನ್ ಹೆಸರಿನ ನೃತ್ಯ ತಂಡವು ಪ್ರಚೋದನಕಾರಿ ಸ್ಟೆಪ್ ಹಾಕಿ ಗಮನ ಸೆಳೆದಿದೆ.
ಈ ಕಾರ್ಯಕ್ರಮದಲ್ಲಿ ಇಂತಹ ಡ್ಯಾನ್ಸ್ ಅಗತ್ಯ ಮತ್ತು ಅನಿವಾರ್ಯತೆ ಬಗ್ಗೆ ಈಗ ಅಂತರ್ಜಾಲದಲ್ಲಿ ಚರ್ಚೆ ನಡೆದಿದೆ. ಸಾಕಷ್ಟು ಮಂದಿ ಇಂತಹ ನೃತ್ಯ ಅಗತ್ಯವಿರಲಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
ಜಾಹೀರಾತಿನ ಮೂಲಕ ವೀಕ್ಷಕರ ಮನ ಗೆದ್ದ ಭೀಮಾ ಜ್ಯೂವೆಲರ್ಸ್..!
ಯುದ್ಧ ನೌಕೆಯಲ್ಲಿ ಅರ್ಧಂಬರ್ಧ ಬಟ್ಟೆ ಧರಿಸಿರುವುದು, ಕೆಟ್ಟದಾದ ನೃತ್ಯ ಸೂಕ್ತವಲ್ಲ ಎಂಬ ಅಭಿಪ್ರಾಯಗಳು ಸಹ ವ್ಯಕ್ತವಾಗಿದೆ, ನೌಕಾಪಡೆಯ ತೀರ್ಮಾನದ ಬಗ್ಗೆ ಅಲ್ಲಿನ ಸೆನೆಟರ್ಗಳು ಅಸಮಾಧಾನ ಹೊರಹಾಕಿದ್ದಾರೆ.
ಈ ನಡುವೆ ಕೆಲವರು ನೃತ್ಯ ಮಾಡಿದ ಯುವತಿಯರ ಪರವಾಗಿಯೂ ಮಾತನಾಡಿದ್ದಾರೆ. ಒಟ್ಟಾರೆ ಈ ನೃತ್ಯದ ವಿಚಾರ ಆಸ್ಟ್ರೇಲಿಯಾದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.