ಮೈಸೂರಿನ ಕಪ್ಪಸೋಗೆ ಗ್ರಾಮದಲ್ಲಿರುವ ದಲಿತ ಸಮುದಾಯದ ಇಬ್ಬರು ಸಹೋದರರು ಆಪದ್ಬಾಂಧವರಾಗಿದ್ದಾರೆ. ತಮ್ಮೂರಲ್ಲದೇ ಅಕ್ಕಪಕ್ಕದ ಕುರುಹುಂಡಿ, ಗೌಡರಹುಂಡಿ ಹಾಗೂ ಮದನಹಳ್ಳಿ ಗ್ರಾಮದಲ್ಲಿರುವ ದೊಡ್ಡ ಸಂಖ್ಯೆಯ ದಲಿತ ಜನಾಂಗದ ಮಂದಿಗೆ ಉಚಿತ ಹೇರ್‌ಕಟಿಂಗ್ ಸೇವೆಗಳನ್ನು ಕೊಡುತ್ತಿದ್ದಾರೆ ಈ ಅಣ್ಣತಮ್ಮಂದಿರು.
ಈ ಊರುಗಳಲ್ಲಿ ಸಮುದಾಯದ ಜನರಿಗೆ ಹೇರ್‌ಕಟ್ ಮಾಡಲು ಕಟಿಂಗ್ ಅಂಗಡಿಗಳು ನಿರಾಕರಿಸಿದ ಕಾರಣ ಕೆಪಿ ಮಹಾದೇವ ಹಾಗೂ ಕೆಪಿ ಸಿದ್ಧರಾಜು ಹೆಸರಿನ ಈ ಅಣ್ಣತಮ್ಮಂದಿರು ತಮ್ಮ ಸಮುದಾಯದ ಮಂದಿಗೆ ಅವರ ಮನೆ ಬಾಗಿಲುಗಳಿಗೇ ತೆರಳಿ ಹೇರ್‌ಕಟ್ ಮಾಡಿಕೊಡುತ್ತಿದ್ದಾರೆ.
ಇದಕ್ಕೂ ಮುಂಚೆ ಈ ಜನರು ಹೇರ್‌ಕಟ್‌ಗೆಂದು ಸಮೀಪದ ಉಲ್ಲಹಳ್ಳಿ ಅಥವಾ ನಂಜನಗೂಡು ಟೌನ್‌ಗೆ ಹೋಗಬೇಕಾಗಿ ಬಂದಿತ್ತು. ಬರೀ ಹೇರ್‌ಕಟ್‌ನ ಕಾರಣಕ್ಕೆ ಒಂದು ದಿನ ಕೆಲಸ ಮಾಡದೇ ಸಮಯ ವ್ಯರ್ಥವಾಗುತ್ತಿದ್ದ ಈ ಮಂದಿಯ ನೆರವಿಗೆ ಬಂದಿದ್ದಾರೆ ಕಪ್ಪಸೋಗೆ ಬ್ರದರ್ಸ್.
ಫುಟ್ಬಾಲ್ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿದ ಕಳ್ಳ: ವಿಡಿಯೋ ವೈರಲ್
ಕಳೆದ ಎಂಟು ವರ್ಷಗಳಿಂದ ವೃತ್ತಿಯಲ್ಲಿರುವ ಈ ಸಹೋದರರು ಸರ್ಕಾರವೇನಾದರೂ ತಮಗೆ ನೆರವು ನೀಡಿದಲ್ಲಿ ಎಲ್ಲ ಜನಾಂಗದವರಿಗೂ ಮುಕ್ತವಾಗಿರುವ ಸಲೂನ್ ಒಂದನ್ನು ಆರಂಭಿಸಲು ಆಸೆ ಇಟ್ಟುಕೊಂಡಿದ್ದಾರೆ. ಆದರೆ ಎಷ್ಟೇ ಮನವಿ ಮಾಡಿಕೊಂಡರೂ ಸಹ ಸ್ಥಳೀಯ ರಾಜಕಾರಣಿಗಳಿಂದ ತಮಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಸಹೋದರರು.
ಕೋವಿಡ್ ಸಾಂಕ್ರಮಿದ ಆರಂಭಗೊಂಡಾಗಿನಿಂದ ಪ್ರತಿಯೊಂದು ಜನಾಂಗದ ಮಂದಿಗೂ ತಮ್ಮ ಸರ್ವೀಸ್ ಕೊಡುತ್ತಿರುವ ಈ ಸಹೋದರರು ಹೇರ್‌ಕಟ್‌ಗೆ 40 ರೂಪಾಯಿ ಹಾಗೂ ಶೇವಿಂಗ್‌ಗೆ 20 ರೂಪಾಯಿ ಚಾರ್ಜ್ ಮಾಡುತ್ತಾರೆ.