ಗರ್ಭಿಣಿಯೊಬ್ಬರು ಎರಡು ತಲೆ ಹಾಗೂ ಮೂರು ಕೈಗಳನ್ನ ಹೊಂದಿರುವ ಸಯಾಮಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಓಡಿಶಾದ ಕೆಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.
ಈ ಅಪರೂಪದ ಸಯಾಮಿ ಶಿಶುಗಳು ಒಂದೇ ಎದೆ ಹಾಗೂ ಹೊಟ್ಟೆಯನ್ನ ಹೊಂದಿವೆ. ಈ ಸಯಾಮಿ ಮಕ್ಕಳ ಪೋಷಕರು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಮಕ್ಕಳ ತಾಯಿ ಕೆಲ ವರ್ಷಗಳ ಹಿಂದೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದರು.
ಸಯಾಮಿ ಶಿಶುಗಳ ಜನನವಾಗೋದು ತುಂಬಾನೇ ಅಪರೂಪ. ತಾಯಿಯ ಗರ್ಭದಲ್ಲಿ ಭ್ರೂಣದ ಬೆಳವಣಿಗೆ ಸರಿಯಾಗಿ ಆಗದೇ ಇದ್ದಲ್ಲಿ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.
ಮಿಲಿಯನ್ ಜನಸಂಖ್ಯೆಯಲ್ಲಿ ಒಂದು ಶಿಶು ಈ ರೀತಿ ಜನಿಸಬಹುದು ಎಂದು ಕೇಂದ್ರಾಪುರ ಜಿಲ್ಲಾಸ್ಪತ್ರೆಯ ಹೆರಿಗೆ ತಜ್ಞ ದೇಬಾಶಿಶ್ ಸಾಹೋ ಹೇಳಿದ್ದಾರೆ.
ಈ ಮಗುವು ಎರಡು ಬಾಯಿಯಲ್ಲಿ ಆಹಾರ ಸೇವಿಸುತ್ತೆ ಹಾಗೂ ಎರಡು ಮೂಗುಗಳಿಂದ ಉಸಿರಾಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ರಾಜೇಂದ್ರ ಏರಿಯಾದ ಕನಿ ಗ್ರಾಮದ ಉಮಾಕಂತ್ ಪರಿದಾ ಪತ್ನಿ ಅಂಬಿಕಾ ಸಿ ಸೆಕ್ಷನ್ ಮೂಲಕ ಈ ಸಯಾಮಿ ಶಿಶುಗಳಿಗೆ ಜನ್ಮ ನೀಡಿದ್ದರು.
ಈ ಸಯಾಮಿ ಅವಳಿ ಶಿಶುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಿಂದ ಕಟಕ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಆಸ್ಪತ್ರೆಗೆ ಸೇರಿಸಲಾಗಿದೆ.