ದೋಸೆ ದಕ್ಷಿಣ ಭಾರತದ ಜನಪ್ರಿಯ ತಿನಿಸುಗಳಲ್ಲೊಂದು. ಅಂದ ಹಾಗೆ ನಾವು ಈ ಮಾತನ್ನ ಹೇಳೋಕೆ ಕಾರಣ ಬಾಲಿವುಡ್ ನಟ ಸೋನುಸೂದ್. ಸೋನು ಸೂದ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪರ್ಫೆಕ್ಟ್ ದೋಸೆಯನ್ನ ಹೇಗೆ ಮಾಡೋದು ಅನ್ನೋದನ್ನ ಹೇಳಿಕೊಟ್ಟಿದ್ದಾರೆ.
ಅಭಿಮಾನಿಗಳ ಜೊತೆ ಬೆರೆಯೋಕೆ ಸೋನು ಸೂದ್ ಯಾವಾಗಲೂ ಇಂತಹ ಹಲವಾರು ಕೆಲಸಗಳನ್ನ ಮಾಡ್ತಾನೆ ಇರ್ತಾರೆ. ಈ ಬಾರಿ ಸೂದ್ ದೋಸೆ ಮಾಡೋದನ್ನ ಕಲಿಸಿಕೊಟ್ಟಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ನಟ ಸೋನು ಸೂದ್ ಈ ವಿಡಿಯೋವನ್ನ ಶೇರ್ ಮಾಡಿದ್ದು ಅಭಿಮಾನಿಗಳು ವ್ಹಾವ್ ಎಂದು ಕಮೆಂಟ್ ಹಾಕ್ತಿದ್ದಾರೆ.
https://www.instagram.com/tv/CNjTVTDgU4A/?utm_source=ig_web_copy_link