ಪಾಸ್ಪೋರ್ಟ್ ಫೋಟೋ ತೆಗೆಸಿಕೊಳ್ಳಲು ಹೋದಾಗ ಯಾರೇ ಆದರೂ ಸುಂದರವಾಗಿ ನೋಡಲು ಬಯಸುತ್ತಾರೆ. ಆದರೆ ನಿಮ್ಮ ಫೋಟೋಗ್ರಾಫ್ಗಳನ್ನು ಕ್ಲಿಕ್ ಮಾಡುತ್ತಿರುವ ವ್ಯಕ್ತಿ ನೀವು ಸ್ಮೈಲ್ ಮಾಡುವ ಮುನ್ನವೇ ಕ್ಲಿಕ್ ಮಾಡಿದರೆ ಹೇಗೆ?
ಇಂಥದ್ದೇ ಒಂದು ಘಟನೆಯಲ್ಲಿ ಮಹಿಳೆಯೊಬ್ಬರು ತಮ್ಮ ಪಾಸ್ಪೋರ್ಟ್ ಫೋಟೋ ತೆಗೆಸಿಕೊಳ್ಳಲು ಹೋಗಿದ್ದು, ಆ ಫೋಟೋದಲ್ಲಿ ತಮ್ಮ ಕೂದಲನ್ನು ಎಡಿಟ್ ಮಾಡಿರುವುದನ್ನು ಕಂಡುಕೊಂಡಿದ್ದಾರೆ. ತಮ್ಮ ಪಾಸ್ಪೋರ್ಟ್ ಫೋಟೋ ಮನೆಗೆ ತಲುಪಿದ ಕೂಡಲೇ ಅದನ್ನು ನೋಡಿ ಕೇಟಿಗೆ ದಂಗುಬಡಿದುಬಿಟ್ಟಿದೆ.
ದಲೇರ್ ಮೆಹಂದಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಕ್ರಿಸ್ ಗೇಲ್
ಫೋಟೋ ತೆಗೆಸಿಕೊಂಡ ವೇಳೆ ಕೇಟಿಯ ಕೂದಲು ಅರಳಿಕೊಂಡಿತ್ತು. ಕೂದಲು ಸರಿ ಮಾಡಿಕೊಳ್ಳಲು ಹೇಳದೇ ಆಕೆಯ ಫೋಟೋವನ್ನು ಛಾಯಾಗ್ರಾಹಕರು ತೆಗೆದುಬಿಟ್ಟಿದ್ದಾರೆ. ಬಳಿಕ ಫೋಟೋವನ್ನು ಎಡಿಟ್ ಮಾಡಿದ ಸ್ಟುಡಿಯೋ ಸಿಬ್ಬಂದಿ ಹೀಗೆ ಎಡಿಟ್ ಮಾಡಿ ಆಕೆಗೆ ಫೋಟೋ ಕಳುಹಿಸಿದ್ದಾರೆ. ಇದಾದ ಮೇಲೆ ತನ್ನ ಅಸಲಿ ರೂಪದ ಚಿತ್ರಗಳ ಪ್ರಿಂಟ್ಔಟ್ ಅನ್ನು ಕೇಟಿ ತರಿಸಿಕೊಂಡಿದ್ದಾರೆ.