ಅತಿ ಕಡಿಮೆ ಬೆಲೆಗೆ ಅನಿಯಮಿತ ಕರೆ ಹಾಗೂ ಹೆಚ್ಚಿನ ಡೇಟಾ ಬಯಸುವ ಗ್ರಾಹಕರಿಗೊಂದು ಖುಷಿ ಸುದ್ದಿಯಿದೆ. ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಈ ಬಳಕೆದಾರರಿಗಾಗಿ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
ಬಿಎಸ್ಎನ್ಎಲ್ ನ ಈ ಯೋಜನೆ ಕೇವಲ 47 ರೂಪಾಯಿಗೆ ಲಭ್ಯವಿದೆ. ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಈ ಯೋಜನೆಯಲ್ಲಿ 28 ದಿನಗಳವರೆಗೆ 1 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್ ಜೊತೆ ಅನಿಯಮಿತ ಕರೆ ಸೌಲಭ್ಯ ನೀಡ್ತಿದೆ. ಬಿಎಸ್‌ಎನ್‌ಎಲ್‌ನ ಈ ರೀಚಾರ್ಜ್ ಪ್ಲಾನ್, ಏರ್ಟೆಲ್, ವೊಡಾಫೋನ್-ಐಡಿಯಾ, ಜಿಯೋಗೆ ಸ್ಪರ್ಧೆ ನೀಡ್ತಿದೆ.
ಖಾಸಗಿ ಟೆಲಿಕಾಂ ಕಂಪನಿ ಏರ್ಟೆಲ್ 100 ರೂಪಾಯಿಗಿಂತ ಕಡಿಮೆ ಬೆಲೆಗೆ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. ಮೊದಲನೆಯದು 79 ರೂಪಾಯಿ ಮತ್ತು ಎರಡನೆಯದು 49 ರೂಪಾಯಿ. ಈ ಎರಡೂ ಯೋಜನೆಗಳಲ್ಲಿ ಬಳಕೆದಾರರು ಕೇವಲ 200 ಎಂಬಿ ಡೇಟಾವನ್ನು ಮಾತ್ರ ಪಡೆಯಬಹುದು. ಜಿಯೋ 51 ಮತ್ತು 21 ರೂಪಾಯಿಗಳ ಯೋಜನೆ ನೀಡ್ತಿದೆ. ಆದ್ರೆ ಇವೆರಡೂ ಟಾಪ್-ಅಪ್ ಯೋಜನೆಗಳಾಗಿದ್ದು, ಇದರಲ್ಲಿ ಯಾವುದೇ ಸಿಂಧುತ್ವ ಲಭ್ಯವಿಲ್ಲ. ವೊಡಾಫೋನ್-ಐಡಿಯಾ 48 ಮತ್ತು 98 ರೂಪಾಯಿಗಳ ಎರಡು ಯೋಜನೆಗಳನ್ನು ನೀಡ್ತಿದೆ. ಆದ್ರೆ ಇದಕ್ಕೆ ಬಿಎಸ್ಎನ್ಎಲ್ ನಷ್ಟು ಲಾಭ ಸಿಗ್ತಿಲ್ಲ.