alex Certify ಯುಗಾದಿಗೂ ಮುನ್ನ BSNL ಗ್ರಾಹಕರಿಗೆ ಭರ್ಜರಿ ‌ʼಬಂಪರ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಗಾದಿಗೂ ಮುನ್ನ BSNL ಗ್ರಾಹಕರಿಗೆ ಭರ್ಜರಿ ‌ʼಬಂಪರ್ʼ

ಅತಿ ಕಡಿಮೆ ಬೆಲೆಗೆ ಅನಿಯಮಿತ ಕರೆ ಹಾಗೂ ಹೆಚ್ಚಿನ ಡೇಟಾ ಬಯಸುವ ಗ್ರಾಹಕರಿಗೊಂದು ಖುಷಿ ಸುದ್ದಿಯಿದೆ. ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಈ ಬಳಕೆದಾರರಿಗಾಗಿ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.

ಬಿಎಸ್ಎನ್ಎಲ್ ನ ಈ ಯೋಜನೆ ಕೇವಲ 47 ರೂಪಾಯಿಗೆ ಲಭ್ಯವಿದೆ. ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಈ ಯೋಜನೆಯಲ್ಲಿ 28 ದಿನಗಳವರೆಗೆ 1 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್ ಜೊತೆ ಅನಿಯಮಿತ ಕರೆ ಸೌಲಭ್ಯ ನೀಡ್ತಿದೆ. ಬಿಎಸ್‌ಎನ್‌ಎಲ್‌ನ ಈ  ರೀಚಾರ್ಜ್ ಪ್ಲಾನ್, ಏರ್ಟೆಲ್, ವೊಡಾಫೋನ್-ಐಡಿಯಾ, ಜಿಯೋಗೆ ಸ್ಪರ್ಧೆ ನೀಡ್ತಿದೆ.

ಖಾಸಗಿ ಟೆಲಿಕಾಂ ಕಂಪನಿ ಏರ್ಟೆಲ್ 100 ರೂಪಾಯಿಗಿಂತ ಕಡಿಮೆ ಬೆಲೆಗೆ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. ಮೊದಲನೆಯದು 79 ರೂಪಾಯಿ ಮತ್ತು ಎರಡನೆಯದು 49 ರೂಪಾಯಿ. ಈ ಎರಡೂ ಯೋಜನೆಗಳಲ್ಲಿ ಬಳಕೆದಾರರು ಕೇವಲ 200 ಎಂಬಿ ಡೇಟಾವನ್ನು ಮಾತ್ರ ಪಡೆಯಬಹುದು. ಜಿಯೋ 51 ಮತ್ತು 21 ರೂಪಾಯಿಗಳ ಯೋಜನೆ ನೀಡ್ತಿದೆ. ಆದ್ರೆ ಇವೆರಡೂ ಟಾಪ್-ಅಪ್ ಯೋಜನೆಗಳಾಗಿದ್ದು, ಇದರಲ್ಲಿ ಯಾವುದೇ ಸಿಂಧುತ್ವ ಲಭ್ಯವಿಲ್ಲ. ವೊಡಾಫೋನ್-ಐಡಿಯಾ 48 ಮತ್ತು 98 ರೂಪಾಯಿಗಳ ಎರಡು ಯೋಜನೆಗಳನ್ನು ನೀಡ್ತಿದೆ. ಆದ್ರೆ ಇದಕ್ಕೆ ಬಿಎಸ್ಎನ್ಎಲ್ ನಷ್ಟು ಲಾಭ ಸಿಗ್ತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...