ಕೇರಳದ ತ್ರಿಶೂರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾದ ಜಾನಕಿ ಓಮ್ ಕುಮಾರ್ ಹಾಗೂ ನವೀನ್ ಕೆ. ರಜಾಕ್ ಡ್ಯಾನ್ಸಿಂಗ್ ವಿಡಿಯೋದ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಇವರ ಡ್ಯಾನ್ಸಿಂಗ್ ಟ್ಯಾಲೆಂಟ್ಗೆ ಅನೇಕರು ತಲೆಬಾಗಿದ್ದರೆ ಇನ್ನೂ ಕೆಲವರು ಲವ್ ಜಿಹಾದ್ ಆಗಬಹುದೇ ಎಂದು ಶಂಕೆ ಪಡ್ತಿದ್ದಾರೆ.
ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಮಂದಿ ಜಾನಕಿ ಪೋಷಕರಿಗೆ ಮಗಳ ಬಗ್ಗೆ ಎಚ್ಚರ ವಹಿಸಿ ಎಂದೆಲ್ಲ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಈ ಎಲ್ಲಾ ವಿವಾದಗಳಿಗೆ ತಲೆಕೆಡಿಸಿಕೊಳ್ಳದ ವೈದ್ಯಕೀಯ ವಿದ್ಯಾರ್ಥಿಗಳು ನಿನ್ನೆ ಮತ್ತೊಂದು ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಟ್ರೋಲ್ ಮಾಡುವವರ ಗುಂಪು ಒಂದೆಡೆಯಾದರೆ ಕೇರಳದ ವೈದ್ಯಕೀಯ ವಿದ್ಯಾರ್ಥಿಗಳು ನವೀನ್ ಹಾಗೂ ಜಾನಕಿಗೆ ತಮ್ಮ ಬೆಂಬಲವನ್ನ ಸೂಚಿಸಿವೆ. ಫೇಸ್ಬುಕ್ನಲ್ಲಿ ತಮ್ಮ ಬೆಂಬಲವನ್ನ ಸೂಚಿಸಿ ವೈದ್ಯಕೀಯ ವಿದ್ಯಾರ್ಥಿಗಳು ಸಾಕಷ್ಟು ಪೋಸ್ಟ್ಗಳನ್ನ ಶೇರ್ ಮಾಡ್ತಿದ್ದಾರೆ. ವೈದ್ಯಕೀಯ ಕಾಲೇಜಿನ ಕ್ಯಾಂಪಸ್ನಲ್ಲಿ ಮನುಷ್ಯರಿದ್ದಾರೆ. ಇಲ್ಲಿ ಧರ್ಮ, ಜಾತಿ, ಲಿಂಗ ಇವೆಲ್ಲವೂ ಅಪ್ರಸ್ತುತ ಎಂದು ಪೋಸ್ಟ್ಗಳನ್ನ ಹಂಚಿಕೊಳ್ಳಲಾಗ್ತಿದೆ.
ಇದು ಮಾತ್ರವಲ್ಲದೇ ತ್ರಿಶೂರ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಇಬ್ಬರು ನೃತ್ಯ ಮಾಡ್ತಿರುವ ವಿಡಿಯೋವನ್ನ ಶೇರ್ ಮಾಡುವ ಮೂಲಕ ತಮ್ಮ ಬೆಂಬಲವನ್ನ ಸೂಚಿಸಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಕಾರಿಡಾರ್ನಲ್ಲಿ ಡ್ಯಾನ್ಸ್ ಮಾಡಿ ಆ ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಡ್ಯಾನ್ಸಿಂಗ್ ಪ್ರತಿಭಟನೆಗೆ ಸಾಥ್ ನೀಡ್ತಿದ್ದಾರೆ.
ವಿದ್ಯಾರ್ಥಿಗಳು ಮಾತ್ರವಲ್ಲದೇ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಕೂಡ ಟ್ವೀಟ್ ಮೂಲಕ ಈ ಡ್ಯಾನ್ಸಿಂಗ್ ಜೋಡಿಗೆ ಬೆಂಬಲ ಸೂಚಿಸಿದ್ದಾರೆ.
https://www.instagram.com/p/CMxAI3Ogbd5/?utm_source=ig_web_copy_link
https://www.instagram.com/p/CNaCvyep85r/?utm_source=ig_web_copy_link
https://twitter.com/i/status/1380715247875411968