alex Certify ವೈದ್ಯಕೀಯ ವಿದ್ಯಾರ್ಥಿಗಳಿಗೆ ಹರಿದುಬಂತು ಮತ್ತಷ್ಟು ಬೆಂಬಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯಕೀಯ ವಿದ್ಯಾರ್ಥಿಗಳಿಗೆ ಹರಿದುಬಂತು ಮತ್ತಷ್ಟು ಬೆಂಬಲ

ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನ ವಿದ್ಯಾರ್ಥಿಗಳಾದ ಜಾನಕಿ ಓಮ್​ ಕುಮಾರ್​ ಹಾಗೂ ನವೀನ್​ ಕೆ. ರಜಾಕ್​ ಡ್ಯಾನ್ಸಿಂಗ್​ ವಿಡಿಯೋದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಇವರ ಡ್ಯಾನ್ಸಿಂಗ್​ ಟ್ಯಾಲೆಂಟ್​ಗೆ ಅನೇಕರು ತಲೆಬಾಗಿದ್ದರೆ ಇನ್ನೂ ಕೆಲವರು ಲವ್​​ ಜಿಹಾದ್​ ಆಗಬಹುದೇ ಎಂದು ಶಂಕೆ ಪಡ್ತಿದ್ದಾರೆ.

ಹೀಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಕೆಲ ಮಂದಿ ಜಾನಕಿ ಪೋಷಕರಿಗೆ ಮಗಳ ಬಗ್ಗೆ ಎಚ್ಚರ ವಹಿಸಿ ಎಂದೆಲ್ಲ ಟ್ರೋಲ್​ ಮಾಡುತ್ತಿದ್ದಾರೆ. ಆದರೆ ಈ ಎಲ್ಲಾ ವಿವಾದಗಳಿಗೆ ತಲೆಕೆಡಿಸಿಕೊಳ್ಳದ ವೈದ್ಯಕೀಯ ವಿದ್ಯಾರ್ಥಿಗಳು ನಿನ್ನೆ ಮತ್ತೊಂದು ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಟ್ರೋಲ್​ ಮಾಡುವವರ ಗುಂಪು ಒಂದೆಡೆಯಾದರೆ ಕೇರಳದ ವೈದ್ಯಕೀಯ ವಿದ್ಯಾರ್ಥಿಗಳು ನವೀನ್​ ಹಾಗೂ ಜಾನಕಿಗೆ ತಮ್ಮ ಬೆಂಬಲವನ್ನ ಸೂಚಿಸಿವೆ. ಫೇಸ್​ಬುಕ್​ನಲ್ಲಿ ತಮ್ಮ ಬೆಂಬಲವನ್ನ ಸೂಚಿಸಿ ವೈದ್ಯಕೀಯ ವಿದ್ಯಾರ್ಥಿಗಳು ಸಾಕಷ್ಟು ಪೋಸ್ಟ್​ಗಳನ್ನ ಶೇರ್​ ಮಾಡ್ತಿದ್ದಾರೆ. ವೈದ್ಯಕೀಯ ಕಾಲೇಜಿನ ಕ್ಯಾಂಪಸ್​​ನಲ್ಲಿ ಮನುಷ್ಯರಿದ್ದಾರೆ. ಇಲ್ಲಿ ಧರ್ಮ, ಜಾತಿ, ಲಿಂಗ ಇವೆಲ್ಲವೂ ಅಪ್ರಸ್ತುತ ಎಂದು ಪೋಸ್ಟ್​ಗಳನ್ನ ಹಂಚಿಕೊಳ್ಳಲಾಗ್ತಿದೆ.

ಇದು ಮಾತ್ರವಲ್ಲದೇ ತ್ರಿಶೂರ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಇಬ್ಬರು ನೃತ್ಯ ಮಾಡ್ತಿರುವ ವಿಡಿಯೋವನ್ನ ಶೇರ್​ ಮಾಡುವ ಮೂಲಕ ತಮ್ಮ ಬೆಂಬಲವನ್ನ ಸೂಚಿಸಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಕಾರಿಡಾರ್​ನಲ್ಲಿ ಡ್ಯಾನ್ಸ್ ಮಾಡಿ ಆ ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ಡ್ಯಾನ್ಸಿಂಗ್​ ಪ್ರತಿಭಟನೆಗೆ ಸಾಥ್​ ನೀಡ್ತಿದ್ದಾರೆ.

ವಿದ್ಯಾರ್ಥಿಗಳು ಮಾತ್ರವಲ್ಲದೇ ಕಾಂಗ್ರೆಸ್​ ಹಿರಿಯ ನಾಯಕ ಶಶಿ ತರೂರ್​ ಕೂಡ ಟ್ವೀಟ್​ ಮೂಲಕ ಈ ಡ್ಯಾನ್ಸಿಂಗ್​ ಜೋಡಿಗೆ ಬೆಂಬಲ ಸೂಚಿಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...