ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಎಲಾನ್ ಮಸ್ಕ್ರ ಕಂಪನಿ ನ್ಯೂರಾಲಿಂಕ್ ಕಂಪ್ಯೂಟರ್ನಲ್ಲಿ ಮಂಗವೊಂದು ವಿಡಿಯೋಗೇಮ್ ಆಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ. ಎಲಾನ್ ಮಸ್ಕ್ರ ಈ ಕಂಪನಿ ಇಂತಹದ್ದೊಂದು ವಿಶೇಷ ಚಿಪ್ನ್ನು ತಯಾರಿಸಿದ್ದು ಇದರ ಸಹಾಯದಿಂದ ಮೆದುಳನ್ನ ಕಂಪ್ಯೂಟರ್ ಜೊತೆ ಸಂಪರ್ಕ ಮಾಡಬಹುದಾಗಿದೆ.
ಎಲಾನ್ ಮಸ್ಕ್ ಈ ಚಿಪ್ ಬಳಸಿ ಮಂಗವೊಂದು ವಿಡಿಯೋ ಗೇಮ್ ಆಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನ ರೆಕಾರ್ಡ್ ಮಾಡುವ 6 ವಾರಗಳ ಮುಂಚೆ ಕೋತಿಯ ಮೆದುಳಿನಲ್ಲಿ ನ್ಯೂರಾಲಿಕ್ ಚಿಪ್ ಅಳವಡಿಸಿದ್ದಾರೆ.
ಈ ಕೋತಿಗೆ ಮೊದಲು ಒಂದು ಜಾಯ್ಸ್ಟಿಕ್ ಮಾಧ್ಯಮದಿಂದ ಆನ್ಸ್ಕ್ರೀನ್ ಗೇಮ್ ಆಡಿದೆ. ಇದಕ್ಕೆ ಎಲಾನ್ ಮಸ್ಕ್, ಪಾಂಗ್ ನ್ನು ಕೋತಿಯು ತನ್ನ ಬುದ್ಧಿ ಶಕ್ತಿಯನ್ನುಪಯೋಗಿಸಿ ಆಟವಾಡಿದೆ. ಈ ಕೋತಿಯು ಬ್ರೇನ್ಚಿಪ್ ಬಳಕೆ ಮಾಡಿ ಟೆಲಿಪತಿಯ ಸಹಾಯದಿಂದ ಈ ವಿಡಿಯೋಗೇಮ್ ಆಡಿದೆ. ಎಲಾನ್ ಮಸ್ಕ್ರ ಈ ಟ್ವೀಟ್ ಲಕ್ಷಗಟ್ಟಲೇ ಲೈಕ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಈ ಬ್ರೇನ್ ಚಿಪ್ಗಳು ಪಾರ್ಶ್ವವಾಯುವಿನಿಂದ ಬಳಲುತ್ತಿರುವವರಿಗೆ ಸ್ಮಾರ್ಟ್ ಫೋನ್ ಬಳಕೆ ಮಾಡುವಷ್ಟು ಶಕ್ತಿಯನ್ನ ನೀಡುತ್ತೆ. ಕೈ ಬೆರಳಿನಿಗಿಂತ ವೇಗವಾಗಿ ವ್ಯಕ್ತಿ ತನ್ನ ಮೆದುಳಿನ ಚುರುಕಿನಿಂದಾಗಿ ಸ್ಮಾರ್ಟ್ ಫೋನ್ ಬಳಕೆ ಮಾಡ್ತಾರೆ ಅಂತಾ ಮಸ್ಕ್ ಇನ್ನೊಂದು ಟ್ವೀಟ್ ಮಾಡಿದ್ದಾರೆ.
ಸ್ಪೇಸ್ ಎಕ್ಸ್ ಹಾಗೂ ಟೆಸ್ಲಾದಂತಹ ದೈತ್ಯ ಕಂಪನಿಗಳ ಮೂಲಕ ವಾಹನಗಳು ಹಾಗೂ ಅಂತರಿಕ್ಷ ವಿಭಾಗದಲ್ಲಿ ಸಾಧನೆ ಮಾಡಿದ್ದ ಮಸ್ಕ್ ಇದೀಗ ಮನುಷ್ಯನ ಮೆದುಳಿನ ಮೇಲೂ ಕೆಲಸ ಮಾಡೋಕೆ ಶುರು ಮಾಡಿದ್ದಾರೆ. ಈ ಕಂಪನಿಗೆ ಮಸ್ಕ್ ನ್ಯೂರಾಲಿಂಕ್ ಎಂದು ಹೆಸರನ್ನ ಇಟ್ಟಿದ್ದಾರೆ. ಇದು ಮಸ್ಕ್ರ ನ್ಯೂರಲ್ ಇಂಟರ್ಫೇಸ್ ಟೆಕ್ನಾಲಜಿ ಕಂಪನಿಯಾಗಿದೆ. ಇದರ ಸಹಾಯದಿಂದ ಮನುಷ್ಯನ ಮೆದುಳಿನಲ್ಲಿ ಚಿಪ್ನ್ನು ಹಾಕಲಾಗುತ್ತೆ. ಇಲ್ಲಿ ಮೆದುಳಿನ ಎಲ್ಲಾ ಕ್ರಿಯೆಗಳು ರೆಕಾರ್ಡ್ ಮಾಡಲಾಗುತ್ತೆ.