ಈ ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್ ಜನರಿಗೆ ಸರಿಯಾದ ದಾರಿ ತೋರುವ ಬದಲಿಗೆ ಎಲ್ಲೆಲ್ಲೋ ಕರೆದೊಯ್ದುಬಿಡುವ ನಿದರ್ಶನಗಳ ಬಗ್ಗೆ ಸಾಕಷ್ಟು ಓದಿದ್ದೇವೆ.
ಇಂಥದ್ದೇ ಘಟನೆಯೊಂದರಲ್ಲಿ ಇಂಡೋನೇಷ್ಯಾದ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ಸ್ ಸಹವಾಸದಿಂದ ತಪ್ಪಾದ ಮಹಿಳೆಯೊಬ್ಬರನ್ನು ಮದುವೆಯಾಗಿಬಿಡುವ ಸಾಧ್ಯತೆ ಸೃಷ್ಟಿಯಾಗಿತ್ತು. ಒಂದೇ ಗ್ರಾಮದಲ್ಲಿ ನಡೆಯುತ್ತಿದ್ದ ಪ್ರತ್ಯೇಕ ಘಟನೆಗಳಲ್ಲಿ ಮದುವೆ ಹಾಗೂ ನಿಶ್ಚಿತಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಿಶ್ಚಿತಾರ್ಥವಾಗಬೇಕಿದ್ದ 27 ವರ್ಷದ ಉಲ್ಫಾ ಹೆಸರಿನ ಈ ಮಹಿಳೆಗೆ ತನ್ನ ಮನೆಗೆ ತಪ್ಪಾದ ಮದುಮಗ ಬಂದಿದ್ದಾನೆ ಎಂದು ಅರಿವೇ ಇರಲಿಲ್ಲ. “ಆದರೆ ನನ್ನ ಕುಟುಂಬ ಆತನ ಕಡೆಯವರನ್ನು ಸ್ವಾಗತಿಸಿ ಉಡುಗೊರೆಗಳನ್ನು ಬದಲಿಸಿಕೊಳ್ಳಲು ಮುಂದಾಗಿತ್ತು” ಎಂದು ಉಲ್ಫಾ ತಿಳಿಸಿದ್ದಾರೆ.
ಚಕ್ರಗಳ ಸಹಾಯದಿಂದ ಮರುಹುಟ್ಟನ್ನ ಪಡೆದಿದೆ ಈ ಪುಟ್ಟ ಪ್ರಾಣಿ..! ವೈರಲ್ ಆಯ್ತು ವಿಡಿಯೋ
ಅದೃಷ್ಟವಶಾತ್ ಗಂಡಿನ ಕಡೆಯ ವ್ಯಕ್ತಿಯೊಬ್ಬರು ತಾವು ತಪ್ಪಾದ ಮನೆಗೆ ಬಂದಿದ್ದೇವೆ ಎಂದು ಅರಿತುಕೊಂಡು ವಿಚಾರವನ್ನು ಅಲ್ಲಿದ್ದವರಿಗೆಲ್ಲಾ ತಿಳಿಸಿದ್ದಾರೆ. “ಗೂಗಲ್ ಮ್ಯಾಪ್ಸ್ ನಂಬಿಕೊಂಡು ತಪ್ಪಾದ ಮನೆಗೆ ಬಂದುಬಿಟ್ಟಿದ್ದರು” ಎಂದು ಉಲ್ಫಾ ತಿಳಿಸಿದ್ದಾರೆ.
https://www.instagram.com/p/CNRE2Ddnvnl/?utm_source=ig_web_copy_link