ನವದೆಹಲಿ: ಲಿಂಕ್ಡ್ ಇನ್ ಜಾಲತಾಣದ 50 ಕೋಟಿ ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಇತ್ತೀಚೆಗಷ್ಟೇ 53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಲೀಕ್ ಆಗಿತ್ತು.
ಭಾರತ ಸೇರಿದಂತೆ ಅನೇಕ ದೇಶಗಳ 53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, ಇದರ ಬೆನ್ನಲ್ಲೇ ಲಿಂಕ್ಡ್ ಇನ್ 50 ಕೋಟಿ ಬಳಕೆದಾರರ ಇಮೇಲ್, ಫೋನ್ ನಂಬರ್, ಉದ್ಯೋಗ ಸೇರಿದಂತೆ ಖಾಸಗಿ ಮಾಹಿತಿ ಆನ್ಲೈನ್ನಲ್ಲಿ ಮಾರಾಟವಾಗುತ್ತಿದೆ ಎಂದು ಹೇಳಲಾಗಿದೆ.
ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವೃತ್ತಿಪರರ ಜಾಲತಾಣವಾಗಿದ್ದು, ಇದರಲ್ಲಿನ ಮೂರನೇ ಎರಡರಷ್ಟು ಬಳಕೆದಾರರ ಮಾಹಿತಿ ಡಾರ್ಕ್ ವೆಬ್ ನಲ್ಲಿ ಖರೀದಿಗೆ ಇದೆ ಎಂದು ಹೇಳಲಾಗಿದೆ.