ಜೈಪುರ್: ಬಾಲ್ಯ ವಿವಾಹ ತಡೆಯುವ ಉದ್ದೇಶದಿಂದ ವಧು, ವರರ ಜನ್ಮದಿನಾಂಕ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ರಾಜಸ್ಥಾನ ಸರ್ಕಾರ ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಮದುವೆ ಆಹ್ವಾನ ಪತ್ರಿಕೆಯಲ್ಲಿ ವಧು-ವರರ ಹೆಸರನ್ನು ಪ್ರಕಟಿಸುವ ಜೊತೆಗೆ ಅವರ ಜನ್ಮದಿನಾಂಕವನ್ನು ನಮೂದಿಸುವಂತೆ ತಿಳಿಸಲಾಗಿದೆ.
ಬಾಲ್ಯವಿವಾಹ ತಡೆಗೆ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಪ್ರಮಾಣ ಪತ್ರ ಅನುಸಾರ ವಧು-ವರರ ಜನ್ಮದಿನಾಂಕವನ್ನು ಪತ್ರಿಕೆಯಲ್ಲಿ ನಮೂದಿಸಬೇಕು. ಬಾಲ್ಯ ವಿವಾಹ ನಡೆಯುವುದು ಕಂಡುಬಂದಲ್ಲಿ ಕುಟುಂಬದವರು, ಆಯೋಜಕರು, ಅಡುಗೆಭಟ್ಟರು, ಪುರೋಹಿತರು ಹಾಗೂ ಅತಿಥಿಗಳ ವಿರುದ್ಧವೂ ಕೇಸು ದಾಖಲಿಸಲಾಗುವುದು ಎಂದು ಹೇಳಲಾಗಿದೆ.