ದೇಶಾದ್ಯಂತ ಕೊರೋನಾ ವೈರಸ್ ಹಾವಳಿ ಮತ್ತೊಮ್ಮೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ.
ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್ನಿಂದ ರಕ್ಷಿಸಿಕೊಳ್ಳಲು ಅನೇಕ ಸೆಲೆಬ್ರಿಟಿಗಳು ಜನತೆಗೆ ಉತ್ತೇಜನ ಕೊಡುತ್ತಿದ್ದಾರೆ. ಇದೇ ವೇಳೆ ಗುಜರಾತ್ನ ರಾಜ್ಕೋಟ್ನ ಚಿನ್ನದ ವ್ಯಾಪಾರಿಗಳು ಸಹ ಇದೇ ನಿಟ್ಟಿನಲ್ಲಿ ತಮ್ಮದೇ ವಿಶಿಷ್ಟ ಪ್ರಯತ್ನವೊಂದನ್ನು ಮಾಡುತ್ತಿದ್ದಾರೆ.
ಬ್ರಾ ಸೈಜ್ ಕೇಳಿದವನಿಗೆ ಬೆವರಿಳಿಸಿದ ಟೆಲಿವಿಷನ್ ತಾರೆ..!
ಕೋವಿಡ್ ಲಸಿಕೆ ಹಾಕಿಸಿಕೊಂಡ ಮಂದಿಗೆ ಪುಟ್ಟ ಉಡುಗೊರೆಗಳನ್ನು ಕೊಡಲು ಮುಂದಾಗಿದ್ದಾರೆ ಚಿನ್ನದ ವ್ಯಾಪಾರಿಗಳು. ಮಹಿಳೆಯರಿಗೆ ಚಿನ್ನದ ಮೂಗಿನ ಪಿನ್ನು ಹಾಗೂ ಪುರುಷರಿಗೆ ಬ್ಲೆಂಡರ್ಗಳನ್ನು ಕೊಡಲು ಮುಂದಾಗಿದ್ದಾರೆ. ಚಿನ್ನ ವರ್ತಕರ ಸಂಘಟನೆಯ ಸದಸ್ಯರು ಇದಕ್ಕೆಂದೇ ಕ್ಯಾಂಪ್ ಮಾಡಿಕೊಂಡಿದ್ದು, ಲಸಿಕೆ ಪಡೆದ ಮಂದಿಗೆ ಅಲ್ಲಿಯೇ ಉಡುಗೊರೆಗಳನ್ನು ವಿತರಿಸುತ್ತಿದ್ದಾರೆ.