ಗೂಗಲ್ ಪ್ಲೇ ಸ್ಟೋರ್ ಲ್ಲಿ ಹೊಸ ಆಂಡ್ರಾಯ್ಡ್ ಮಾಲ್ವೇರ್ ಕಂಡುಬಂದಿದೆ. ಇದು ಸ್ಮಾರ್ಟ್ ಫೋನ್ ಗೆ ಪ್ರವೇಶಿಸಿ ಬಳಕೆದಾರರ ಮಾಹಿತಿಯನ್ನು ಕದಿಯಬಹುದಾಗಿದೆ.
ಆಶ್ಚರ್ಯಕರ ಸಂಗತಿಯೆಂದರೆ ಬಳಕೆದಾರರ ವಾಟ್ಸಾಪ್ ಚಾಟ್ ಪ್ರವೇಶಿಸುವ ಮೂಲಕ ವಾಟ್ಸಾಪ್ ಸಂದೇಶಗಳಿಗೆ ಸ್ವಯಂ ಚಾಲಿತವಾಗಿ ಪ್ರತಿಕ್ರಿಯೆ ನೀಡುತ್ತದೆ. ನೆಟ್ ಫ್ಲಿಕ್ಸ್ ಎರಡು ತಿಂಗಳ ಪ್ರೀಮಿಯಂ ಉಚಿತವಾಗಿ ನೀಡಲಾಗುವುದು ಎಂದು ನೋಟಿಫಿಕೇಷನ್ ಬರುತ್ತದೆ.
ಗೂಗಲ್, ದುರುದ್ದೇಶಪೂರಿತ ಫ್ಲಿಕ್ಸ್ ಆನ್ಲೈನ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ. ಆದರೆ, ಈಗಾಗಲೇ 500 ಕ್ಕೂ ಹೆಚ್ಚು ಬಾರಿ ಇದು ಡೌನ್ಲೋಡ್ ಆಗಿಬಿಟ್ಟಿದೆ. 500 ಡೌನ್ಲೋಡ್ ಸಂಖ್ಯೆ ದೊಡ್ಡದಲ್ಲ. ಆದರೆ, ಆಂಡ್ರಾಯ್ಡ್ ಮಾಲ್ವೇರ್ ಸಾಧನಗಳಲ್ಲಿ ವಾಟ್ಸಾಪ್ ಸಂದೇಶಗಳಿಗೆ ಸ್ವಯಂ ಚಾಲಿತವಾಗಿ ಪ್ರತಿಕ್ರಿಯಿಸುವುದರಿಂದ ಹರಡುವ ಸಾಧ್ಯತೆ ಇರುತ್ತದೆ.
ಫ್ಲಿಕ್ಸ್ ಆನ್ಲೈನ್ ಅಪ್ಲಿಕೇಶನ್ ಸೆಟ್ ಗೆ ಡೌನ್ಲೋಡ್ ಮಾಡಿದ ನಂತರ ಇದು ಸೂಕ್ಷ್ಮ ಮಾಹಿತಿಗಳನ್ನು ಕದಿಯಲು ಅನುಮತಿಸುತ್ತದೆ. ಆಂಡ್ರಾಯ್ಡ್ ಮಾಲ್ವೇರ್ ಗೆ ಸಂಪೂರ್ಣ ಸಾಧನವನ್ನು ಅಪಹರಿಸಲು ಸ್ಥಾಪಿತ ಸರ್ವರ್ ನೊಂದಿಗೆ ಸಂವಹನ ಮಾಡಲು ಹ್ಯಾಕರ್ ಗಳು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡುತ್ತದೆ.
ಬಳಕೆದಾರರ ಸೂಕ್ಷ್ಮ, ವೈಯಕ್ತಿಕ ಸಂದೇಶಗಳ ಕಳ್ಳತನ, ಬ್ಯಾಂಕಿಂಗ್ ಸೇವಾ ಲಾಗಿನ್ ರುಜುವಾತುಗಳ ಕಳ್ಳತನ ಮತ್ತು ಇತರ ಪ್ರಮುಖ ಡೇಟಾವನ್ನು ಕದಿಯುವ ಸಾಧ್ಯತೆ ಇದೆ ಎನ್ನಲಾಗಿದೆ.