ಕಲಬುರಗಿ: ರಾಜ್ಯದಲ್ಲಿ ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕೋವಿಡ್ ಸಂದರ್ಭದಲ್ಲಿ ಮುಷ್ಕರ ಸರಿಯಲ್ಲ ಪ್ರತಿಭಟನೆ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಚಿವರು, 6ನೇ ವೇತನ ಆಯೋಗ ಜಾರಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಈಗ ಉಪಚುನಾವಣೆಯಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆಗಳು ಮುಗಿಯುವವರೆಗೂ ಯಾವುದೇ ಭರವಸೆ ನೀಡಲಾಗದು. ಹೀಗಾಗಿ ಸಾರಿಗೆ ನೌಕರರು ಸ್ವಲ್ಪ ಸಮಾಧಾನ ಚಿತ್ತದಿಂದ ಇರಬೇಕು ಎಂದರು.
ಆದಾಯ ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿ: ಫಾರ್ಮ 1,4 ಕ್ಕೆ ಆಫ್ಲೈನ್ ಸೇವೆ ಶುರು
ಒಂದು ವೇಳೆ ಚುನಾವಣಾ ಆಯೋಗ ಅನುಮತಿ ನೀಡಿದರೆ ಸಾರಿಗೆ ನೌಕರರ ಸಂಬಳ ಹೆಚ್ಚಳ ಮಾಡುತ್ತೇವೆ. ಆದರೆ ಮೇ 4ರವರೆಗೆ ಚುನಾವಣೆ ಇರುವುದರಿಂದ ಸಂಬಳ ಹೆಚ್ಚಳ ಕಷ್ಟ ಎಂದರು.
ಇನ್ನು ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಹೀಗಾಗಿ ಬಸ್ ಬಂದ್ ಮಾಡಿ ಮುಷ್ಕರ ನಡೆಸುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಸಾರಿಗೆ ನೌಕರರು ತಮ್ಮ ನಿರ್ಧಾರ ಬದಲಿಸಿ. ಕೆಲದಿನಗಳವರೆಗೆ ಮುಷ್ಕರ ಮುಂದೂಡುವಂತೆ ತಿಳಿಸಿದರು.