ಲಾಸ್ ವೆಗಾಸ್ನ ನೋಂದಣಿ ಕಚೇರಿಯಲ್ಲಿ ಭಾನುವಾರದಂದು ಹೊಸದಾಗಿ ಮದುವೆಯಾಗಲಿಚ್ಛಿಸುವ ಅನೇಕ ಜೋಡಿಗಳು ಒಮ್ಮೆಲೇ ಸಾಲುಗಟ್ಟಿ ನಿಂತಿದ್ದರು.
4 ಏಪ್ರಿಲ್ 2021ರ ದಿನಾಂಕದಲ್ಲಿ ಏನೋ ವಿಶೇಷವಿದೆ ಎಂದು ನಂಬಿದ್ದ 700ರಷ್ಟು ನವಜೋಡಿಗಳು ಮದುವೆಯಾಗಲು ಲೈಸೆನ್ಸ್ ಪಡೆದುಕೊಂಡರು ಎಂದು ಇಲ್ಲಿನ ಕ್ಲಾರ್ಕ್ ಕೌಂಟಿ ಮದುವೆ ಬ್ಯೂರೋದ ಜೆಫ್ ಕ್ಲೈನ್ ತಿಳಿಸಿದ್ದಾರೆ.
“4/3/21ರಂಥ ವಿಶೇಷ ದಿನಾಂಕಗಳು ಯಾವಾಗಲೂ ಬಹಳ ಜನಪ್ರಿಯವಾಗಿರುತ್ತವೆ” ಎಂದು ಕ್ಲರ್ಕ್ ಲಿನ್ ಗೋಯಾ ತಿಳಿಸಿದ್ದು, ಇಂಥದ್ದೇ ಕಾರಣಕ್ಕೆ ಡಿಸೆಂಬರ್ 13, 2014ರಲ್ಲೂ ಸಹ ದೊಡ್ಡ ಸಂಖ್ಯೆಯಲ್ಲಿ ಜೋಡಿಗಳು ಹೀಗೆ ನೆರೆದಿದ್ದರು ಎಂಧು ತಿಳಿಸಿದ್ದಾರೆ.
ಕಾರು ಕದಿಯಲು ಬಂದ ಯುವಕನಿಗೆ ವೃದ್ಧನಿಂದ ಸಖತ್ ಗೂಸಾ
ಸಾಮಾನ್ಯವಾಗಿ ಏಪ್ರಿಲ್ ಮದುವೆಗಳಿಗೆ ಬ್ಯುಸಿಯಾಗಿರುತ್ತದೆ. ಆಸಕ್ತಿಕರ ಸಂಖ್ಯಾರಚನೆ ಇರುವ ದಿನಾಂಕಗಳಲ್ಲಿ ಮದುವೆಯಾಗಲು ಒಮ್ಮೊಮ್ಮೆ 1000ಕ್ಕೂ ಹೆಚ್ಚು ಜೋಡಿಗಳು ಸಾಲುಗಟ್ಟಿ ನಿಂತಿರುತ್ತಾರೆ ಎಂಧು ಗೋಯಾ ಹೇಳಿದ್ದಾರೆ.
10/10/10ರಂದು 2,700 ಮಂದಿ ಮದುವೆಯಾದರೆ, 12/12/12ರಂದು 1,800 ಮಂದಿ ಪರಸ್ಪರರ ಕೈಹಿಡಿದಿದ್ದಾರೆ. 11/11/11ರಂದು 3,125 ಜೋಡಿಗಳು ಹೊಸ ಬಾಳಿಗೆ ಕಾಲಿಟ್ಟಿವೆ.
7/7/7ರಂದು 4,492 ಮಂದಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು ಎಂದು ಗೋಯಾ ತಿಳಿಸಿದ್ದು, ಇದು ಈವರೆಗಿನ ಅತ್ಯಂತ ಜನಪ್ರಿಯ ದಿನಾಂಕವಾಗಿದೆ.