ಕೋವಿಡ್ 19 ನಿರ್ಬಂಧಗಳು ಹಾಗೂ ಲಾಕ್ಡೌನ್ನಿಂದಾಗಿ ಬಹುತೇಕ ಮಂದಿಗೆ ತಮ್ಮ ಕಲೆಯನ್ನ ಪ್ರದರ್ಶಿಸೋಕೆ ಉತ್ತಮ ವೇದಿಕೆ ಸಿಕ್ಕಂತಾಗಿದೆ. ಅಲ್ಲದೇ ಮನೆಯಲ್ಲೇ ಹಣ ಗಳಿಕೆ ಮಾಡೋದಕ್ಕೂ ಇದರಿಂದ ಸಹಾಯಕವಾಗಿದೆ.
ಕಳೆದೊಂದು ವರ್ಷದಲ್ಲಿ ವಿಶ್ವದ ಅನೇಕ ಕುಟುಂಬಗಳು ತಮ್ಮಲ್ಲಿರುವ ಕರಕುಶಲತೆಯನ್ನ ಉದ್ಯಮವನ್ನಾಗಿ ಬದಲಾಯಿಸಿಕೊಂಡಿದೆ. ಅದೇ ರೀತಿ ಲಂಡನ್ನ ನಿವಾಸಿಯಾದ ಫ್ಲೋರಾ ಬ್ಲತ್ವಾಯ್ತ್ ಎಂಬವರು ತಮ್ಮಲ್ಲಿರುವ ಪ್ರತಿಭೆಯನ್ನೇ ಉದ್ಯಮವನ್ನಾಗಿ ಬದಲಾಯಿಸಿಕೊಂಡು ಹಣ ಗಳಿಕೆ ಮಾಡ್ತಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಫ್ಲೋರಾ, ಪ್ಲಾಸ್ಟಿಕ್ ತ್ಯಾಜ್ಯಗಳನ್ನ ಬಳಸಿಕೊಂಡು ವಿಧವಿಧವಾದ ಕಾರ್ಡ್ಗಳನ್ನ ತಯಾರು ಮಾಡೋಕೆ ಶುರು ಮಾಡಿದ್ರು. ಇದೀಗ ಫ್ಲೋರಾ ಎಲ್ಲಾ ಬಗೆಯ ಕಾರ್ಡ್ಗಳನ್ನ ತಯಾರಿಸಿಕೊಡ್ತಿದ್ದಾರೆ.
ಮಾಸ್ಕ್ ಹಾಕಿಕೊಳ್ಳಲು ನಿರಾಕರಿಸಿದ ದಂಪತಿಗೆ ತಕ್ಕ ಪಾಠ..! ವಿಡಿಯೋ ವೈರಲ್
ಬ್ರಿಟನ್ನ ಸಮುದ್ರದ ತೀರ ಹಾಗೂ ನದಿಗಳ ದಂಡೆಯಲ್ಲಿ ಫ್ಲೋರಾ ಪ್ಲಾಸ್ಟಿಕ್ ತ್ಯಾಜ್ಯವನ್ನ ಸಂಗ್ರಹ ಮಾಡ್ತಾರೆ. ಇದನ್ನ ಬಳಸಿ ಗ್ರೀಟಿಂಗ್ ಕಾರ್ಡ್ಗಳನ್ನ ತಯಾರು ಮಾಡೋ ಪ್ಲೋರಾ ಕಾರ್ಡ್ನ ತುದಿಯಲ್ಲಿ ಈ ತ್ಯಾಜ್ಯವನ್ನ ಎಲ್ಲಿ ಸಂಗ್ರಹಿಸಿದ್ದು ಎಂಬುದನ್ನ ಉಲ್ಲೇಖಿಸ್ತಾರೆ.
2019ರಿಂದಲೇ ಸಮುದ್ರದ ತೀರದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನ ಫ್ಲೋರಾ ಸ್ವಚ್ಛ ಮಾಡುತ್ತಿದ್ದರು. ಬಳಿಕ ಇದರಲ್ಲಿ ಕೆಲ ಪ್ಲಾಸ್ಟಿಕ್ಗಳು ಆಕರ್ಷಕವಾಗಿ ಕಂಡವು. ಈ ವೇಳೆ ಅವರಿಗೆ ನಾನ್ಯಾಕೆ ಈ ತ್ಯಾಜ್ಯಗಳಿಂದ ಏನಾದರೂ ಕಲೆಯನ್ನ ಹೊರತರಬಾರದು ಎಂದೆನಿಸಿದೆ. ಮೊಟ್ಟ ಮೊದಲ ಬಾರಿಗೆ ತನ್ನ ಸಹೋದರಿಯ ಮದುವೆ ಪತ್ರಿಕೆ ತಯಾರಿಸಿದ ಫ್ಲೋರಾ ಇದೀಗ ಎಲ್ಲಾ ಬಗೆಯ ಕಾರ್ಡ್ಗಳನ್ನ ಮಾಡಿಕೊಡ್ತಿದ್ದಾರೆ.