ತಂದೆಯಾದವನಿಗೆ ಮಕ್ಕಳ ಪ್ರಗತಿಯನ್ನ ನೋಡೋದಕ್ಕಿಂತ ಪರಮಾನಂದವಾದದ್ದು ಬೇರೊಂದಿಲ್ಲ. ಮಕ್ಕಳು ಜೀವನದಲ್ಲಿ ಅಪ್ರತಿಮ ಸಾಧನೆಯನ್ನ ಮಾಡಿದ್ರೆ ತಂದೆಯ ಖುಷಿಗೆ ಪಾರವೇ ಇರೋದಿಲ್ಲ.
ಇಂತಹದ್ದೇ ಒಂದು ಮನಮಿಡಿಯುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಟಿಕ್ಟಾಕ್ನಲ್ಲಿ ಮೊದಲು ಪೋಸ್ಟ್ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇತರೆ ವೇದಿಕೆಗಳಲ್ಲೂ ಈ ವಿಡಿಯೋ ರೌಂಡ್ಸ್ ಹಾಕುತ್ತಿದೆ. ಈ ವಿಡಿಯೋದಲ್ಲಿ ಅಮೆರಿಕ ಮರೈನ್ ಮಾಸ್ಟರ್ ಸಾರ್ಜೆಂಟ್ ಫಿಶರ್ ತಮ್ಮ ಮಗನಿಗೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಪುತ್ರ ದ್ವಿತೀಯ ಲೆಫ್ಟಿನೆಂಟ್ ಹುದ್ದೆಗೆ ಬಡ್ತಿ ಹೊಂದಿದ ಕಾರಣ ತಂದೆ ಸೆಲ್ಯೂಟ್ ಹೊಡೆದಿದ್ದಾರೆ.
ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿದ ವೃದ್ಧ: ಸಿನಿಮೀಯ ರೀತಿಯಲ್ಲಿ ನಡೀತು ರಕ್ಷಣಾ ಕಾರ್ಯ..!
ಈ ವಿಡಿಯೋ ತುಣುಕಿನಲ್ಲಿ ತಂದೆ ಹಾಗೂ ಮಗ ಎದುರು ಬದುರು ನಿಂತಿದ್ದಾರೆ. ಫಿಶರ್ ಮಾತನಾಡಲು ಆರಂಭಿಸ್ತಾರೆ, ನಾನು ನಿನ್ನ ಬೆಳವಣಿಗೆಯನ್ನ, ಪ್ರಬುದ್ಧನಾಗಿದ್ದನ್ನ ಹಾಗೂ ಈಗ ನೀನೇನಾಗಿದ್ದಿಯೋ ಅದನ್ನ ಹಂತ ಹಂತವಾಗಿ ಕಂಡಿದ್ದೇನೆ. ಮಗನಿಗೆ ಮೊದಲ ಬಾರಿಗೆ ಸೆಲ್ಯೂಟ್ ಮಾಡಿದ ತಂದೆ, ನಿನಗೆ ಮೊದಲ ಸೆಲ್ಯೂಟ್ ಅರ್ಪಿಸುತ್ತಿರೋದು ನನಗೆ ಹೆಮ್ಮೆ ಎನಿಸಿದೆ ಎಂದಿದ್ದಾರೆ.
ಈ ವಿಡಿಯೋವನ್ನ ಟಿಕ್ಟಾಕ್ನಲ್ಲಿ ಶೇರ್ ಮಾಡಿರುವ ಫಿಶರ್, ಒಬ್ಬ ತಂದೆಯಾಗಿ ನನ್ನ ಕೆಲಸವನ್ನ ಈತ ಸರಳೀಕೃತಗೊಳಿಸಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು 4 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ.