ಸೈ-ಫೈ ಹಾಗೂ ಫ್ಯಾಂಟಸಿ ಚಿತ್ರಗಳಲ್ಲಿ ಏನೆಲ್ಲಾ ಕಲ್ಪನೆಗಳನ್ನು ನೋಡಿದ್ದೇವೆ. ಕೆಲವೊಮ್ಮೆ ಈ ಕಲ್ಪನೆಗಳೆಲ್ಲಾ ವೈಜ್ಞಾನಿಕ ಅಭಿವೃದ್ಧಿಯ ಎಲ್ಲೆಯೊಳಗೇ ಇವೆ ಎಂಬುದು ತಿಳಿದ ಮೇಲೆ ವಿಸ್ಮಿತ ಭಾವ ಮೂಡುತ್ತದೆ.
ಗಣಕ ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಹುಬ್ಬೇರಿಸುವಂಥ ಸುಧಾರಣೆಗಳಿಂದಾಗಿ ಇಂದು ಮಾನವರು ಮಾಡುವ ಅನೇಕ ಕೆಲಸಗಳನ್ನು ರೋಬೊಟ್‌ಗಳು ಮಾಡಲು ಆರಂಭಿಸಿವೆ.
ನವೆಂಬರ್ 2020ರಲ್ಲಿ, ಮಾನವನ ಮೆದುಳನ್ನು ವಿಂಡೋಸ್ 10 ಓಎಸ್ ಚಾಲಿತ ಗಣಕಯಂತ್ರವೊಂದಕ್ಕೆ ಸಂಪರ್ಕಿಸಲು ವಿಜ್ಞಾನಿಗಳ ತಂಡವೊಂದು ಯತ್ನಿಸಿತ್ತು. ರಕ್ತನಾಳಗಳಿಗೆ ವೈರ್‌ಗಳನ್ನು ಬೆಸೆದು ಈ ಕೆಲಸ ಮಾಡಲಾಗಿತ್ತು.
ವೈದ್ಯಕೀಯ ವಿದ್ಯಾರ್ಥಿಗಳ ಮಸ್ತ್ ಡ್ಯಾನ್ಸ್: ವಿಡಿಯೋ ವೈರಲ್
ರಕ್ತನಾಳಗಳಿಗೆ ಎಲೆಕ್ಟ್ರೋಡ್‌ಗಳನ್ನು ಸಂಪರ್ಕಿಸಿ, ಅವುಗಳನ್ನು ಮೆದುಳಿನ ಸಿಗ್ನಲ್‌ಗಳನ್ನು ಪತ್ತೆ ಮಾಡಲು ನಿಯೋಜಿಸಿದ್ದರು ಮೆಲ್ಬರ್ನ್ ವಿವಿಯ ಸಂಶೋಧಕರು. ಈ ಸಿಗ್ನಲ್‌ಗಳನ್ನು ಕಂಪ್ಯೂಟರ್‌ಗೆ ಕಳುಹಿಸಲಾಗಿದ್ದು, ಇಬ್ಬರು ವ್ಯಕ್ತಿಗಳ ಮೇಲೆ ಈ ವ್ಯವಸ್ಥೆಯ ಪ್ರಯೋಗವನ್ನೂ ಮಾಡಲಾಗಿದೆ.
ಇದೀಗ ರೋಡ್ ದ್ವೀಪದ ಬ್ರೌನ್ ವಿವಿಯ ವಿಜ್ಞಾನಿಗಳು ವೈರ್‌ಲೆಸ್ ತಂತ್ರಜ್ಞಾನದ ಮೂಲಕ ಮಾನವನ ಮೆದುಳನ್ನು ಕಂಪ್ಯೂಟರ್‌ಗೆ ಮೊದಲ ಬಾರಿಗೆ ಸಂಪರ್ಕಿಸುವ ಕೆಲಸ ಮಾಡಿದ್ದಾರೆ. ಟ್ಯಾಬ್ಲೆಟ್ ಕಂಪ್ಯೂಟರ್ ಒಂದನ್ನು ಬಳಸಿಕೊಂಡು ಬ್ರೇನ್‌ಗೇಟ್ ವ್ಯವಸ್ಥೆ ಮೂಲಕ ಯಾವುದೇ ಕೇಬಲ್ ನೆರವಿಲ್ಲದೇ ಮೆದುಳನ್ನು ಕಂಪ್ಯೂಟರ್‌ಗೆ ಸಂಪರ್ಕಿಸಲು ಸಣ್ಣ ಟ್ರಾನ್ಸ್‌ಮಿಟರ್ ಅನ್ನು ಬಳಸಿದ್ದಾರೆ ವಿಜ್ಞಾನಿಗಳು.