ಮಲೆನಾಡು ಅಂದಮೇಲೆ ಜಲಪಾತಗಳು ಇಲ್ಲ ಅಂದರೆ ಹೇಗೆ..? ಆದರೆ ಎಲ್ಲಾ ಜಲಪಾತಗಳು ಜನರಿಗೆ ಹೆಚ್ಚು ಚಿರಪರಿಚಿತವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಿಂದ 20ಕಿಲೋಮೀಟರ್ ದೂರದಲ್ಲಿ ನಿಮಗೆ ಹಚ್ಚ ಹಸಿರಿನ ಮಲೆನಾಡಿನ ಮಧ್ಯೆ ಸುಂದರ ಜಲಪಾತ ಕಾಣಸಿಗುತ್ತೆ. ಇದನ್ನ ಬುರುಡೆ ಫಾಲ್ಸ್ ಎಂದು ಕರೆಯುತ್ತಾರೆ.
ಈ ಬುರುಡೆ ಫಾಲ್ಸ್ಗೆ ಇಳಿಮನೆ ಫಾಲ್ಸ್ ಎಂಬ ಹೆಸರೂ ಇದೆ. ಚಾರಣಪ್ರಿಯರಿಗೆ ಇದು ಹೇಳಿ ಮಾಡಿಸಿದಂತಹ ಪಿಕ್ನಿಕ್ ಸ್ಪಾಟ್ ಆಗಿದೆ. ಆದರೆ ಮಳೆಗಾಲದ ಸಂದರ್ಭದಲ್ಲಿ ಈ ಜಾಗಕ್ಕೆ ಭೇಟಿ ನೀಡೋದು ಅಷ್ಟೊಂದು ಸೂಕ್ತವಲ್ಲ, ಇಲ್ಲಿನ ಕಲ್ಲುಗಳು ತುಂಬಾನೆ ಜಾರೋದ್ರಿಂದ ಮಳೆಗಾಲದಲ್ಲಿ ಜಲಪಾತಕ್ಕೆ ಭೇಟಿ ನೀಡೋ ಪ್ಲಾನ್ ಮಾಡದಿದ್ದರೇನೆ ಒಳ್ಳೆಯದು.
ಸಿದ್ದಾಪುರದಿಂದ ನೀವು ಸೋವಿನ ಕೊಪ್ಪ ಮಾರ್ಗವಾಗಿ ಈ ಫಾಲ್ಸ್ ತಲುಪಬಹುದಾಗಿದೆ. ಶಿರಸಿಯಿಂದ ಈ ಫಾಲ್ಸ್ಗೆ ಬರುವವರಾದ್ರೆ ಸಿದ್ದಾಪುರ ಕುಮಟಾ ರಸ್ತೆ ಮೂಲಕ ಕ್ಯಾದಗಿ ಗ್ರಾಮಕ್ಕೆ ಬಂದು ನೀವು ಬುರುಡೆ ಫಾಲ್ಸ್ ತಲುಪಬೇಕಾಗುತ್ತದೆ. ಶಿರಸಿಯಿಂದ ಇದು ಸುಮಾರು 40 ಕಿಮೀ ದೂರದಲ್ಲಿದ್ದರೆ ಸಿದ್ದಾಪುರದಿಂದ 20 ಕಿಲೋಮೀಟರ್ ದೂರದಲ್ಲಿದೆ.