ದೇವಾಲಯದ ಆವರಣದಲ್ಲಿ ಆರ್ಎಸ್ಎಸ್ ಚಟುವಟಿಕೆಗೆ ಅನುಮತಿ ಇಲ್ಲ: ಟಿಡಿಎಸ್ 03-04-2021 6:44PM IST / No Comments / Posted In: Latest News, India ದೇವಸ್ಥಾನದ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಗೆ ದೈಹಿಕ ತರಬೇತಿ ನಡೆಸಲು ಅವಕಾಶ ಕೊಟ್ಟಲ್ಲಿ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿರುವಾಂಕೂರು ದೇವಸ್ಥಾನ ಮಂಡಳಿ ತನ್ನೆಲ್ಲಾ ದೇಗುಲ ಶಾಖೆಗಳಿಗೆ ಸುತ್ತೋಲೆ ಹೊರಡಿಸಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ ಅಧೀನದಲ್ಲಿ ಒಟ್ಟು 1242 ದೇವಸ್ಥಾನಗಳಿದ್ದು ಈ ಎಲ್ಲಾ ದೇಗುಲಗಳಿಗೆ ಹೊಸ ನಿಯಮ ಅನ್ವಯವಾಗಲಿದೆ. ದೇವಸ್ವಂ ಮಂಡಳಿಗೆ ಸೇರಿದ ಕೆಲ ಸದಸ್ಯರು ಆರ್ಎಸ್ಎಸ್ ದೈಹಿಕ ತರಬೇತಿ ಕಾರ್ಯಾಗಾರಕ್ಕೆ ದೇವಸ್ಥಾನದ ಆವರಣವನ್ನ ಬಿಟ್ಟುಕೊಡುತ್ತಿರೋದು ಗಮನಕ್ಕೆ ಬಂದಿದೆ. ಆದರೆ ದೇವಸ್ಥಾನದ ಜಾಗವನ್ನ ರಾಜಕೀಯ ಉದ್ದೇಶಕ್ಕೆ ಬಳಸೋದನ್ನ ಸಹಿಸಲು ಸಾಧ್ಯವಿಲ್ಲ ಎಂದು ಟಿಡಿಪಿ ಅಧ್ಯಕ್ಷ ಎನ್. ವಾಸು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ ದೇವಾಲಯದ ಆವರಣದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ಈ ಹಿಂದೆಯೇ ನಿರ್ಧಾರ ಮಾಡಲಾಗಿದೆ. ಈ ಆದೇಶದಲ್ಲಿ ಯಾವುದೇ ರಾಜಿ ಇಲ್ಲ. ಈ ವರ್ಷ ಜನವರಿ ತಿಂಗಳಲ್ಲಿ ಸ್ವೀಕರಿಸಿದ ಕೆಲ ದೂರುಗಳನ್ನ ಆಧರಿಸಿ ಈ ಸುತ್ತೋಲೆಯನ್ನ ಹೊರಡಿಸಲಾಗಿದೆ. ಆರ್ಎಸ್ಎಸ್ ಮಾತ್ರವಲ್ಲದೇ ಯಾವುದೇ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ದೇವಾಲಯದ ಆವರಣವನ್ನ ಬಳಸುವಂತಿಲ್ಲ ಎಂದು ವಾಸು ಹೇಳಿದ್ದಾರೆ.