ರೈಲಿನಲ್ಲಿ ರಾತ್ರಿ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಶಾಕ್ ನೀಡಿದೆ. ರಾತ್ರಿ ಪ್ರಯಾಣ ಮಾಡೋ ಪ್ರಯಾಣಿಕರಿಗೆ ಚಾರ್ಜಿಂಗ್ ಸೌಕರ್ಯ ನೀಡೋದಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ.
ಬೆಂಕಿ ಅವಘಡದಂತಹ ಪ್ರಕರಣಗಳು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮವನ್ನ ಕೈಗೊಳ್ಳಲಾಗಿದೆ. ದೆಹಲಿ – ಡೆಹರಾಡೂನ್ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಮಾರ್ಚ್ 13ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 8 ಕೋಚ್ಗಳಿಗೆ ಬೆಂಕಿ ಆವರಿಸಿತ್ತು.
ಇದು ಮಾತ್ರವಲ್ಲದೇ ಧೂಮಪಾನಿಗಳ ಹಾವಳಿಗೂ ರೈಲ್ವೆ ಇಲಾಖೆ ಲಗಾಮು ಹಾಕಲು ನಿರ್ಧರಿಸಲಾಗಿದೆ. ಇಂತಹ ಅಪರಾಧ ಎಸಗುವವರಿಗೆ ಶಿಕ್ಷೆಯ ಪ್ರಮಾಣವನ್ನ ಹೆಚ್ಚಿಸೋಕೆ ಚರ್ಚೆ ನಡೆಯುತ್ತಿದೆ. ರೈಲಿನ ಒಳಗೆ ಧೂಮಪಾನ ಮಾಡುವವರಿಗೆ ರೈಲ್ವೆ ಆಕ್ಟ್ ಸೆಕ್ಷನ್ 167ರ ಅಡಿಯಲ್ಲಿ 100 ರೂಪಾಯಿ ದಂಡ ವಿಧಿಸಲಾಗ್ತಿದೆ.
ಪ್ರಯಾಣಿಕರ ಸುರಕ್ಷತೆಯನ್ನ ಗಮನದಲ್ಲಿ ಇಟ್ಟುಕೊಂಡು ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಚಾರ್ಜಿಂಗ್ ಪೋರ್ಟಲ್ ಬಂದ್ ಇರಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿ ಸುಮಿತ್ ಠಾಕೂರ್ ಹೇಳಿದ್ದಾರೆ.